ಕಿತ್ತೂರು :ಕಿತ್ತೂರು ಉತ್ಸವ ನೋಡಿ ಹಿಂದಿರುವಾಗ ಭೀಕರ ಅಪಘಾತ ಸಂಭವಿಸಿ ಎರಡು ಜನರು ದುರ್ಮರಣ ಹೊಂದಿರುವ ಘಟನೆ ಕಿತ್ತೂರು ಪಟ್ಟಣದ ಹೊರವಲಯದಲ್ಲಿರುವ ಪುಣೆ ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ನಿವಾಸಿಗಳಾದ ಬಾಳಪ್ಪ ತಳವಾರ(33), ಕರೆಪ್ಪ ತಳವಾರ(36) ಮೃತ ಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಿತ್ತೂರು ಉತ್ಸವ ನೋಡಿ ವಾಪಸಾಗುತ್ತಿದ್ದವರು ರಸ್ತೆ ದಾಟುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಬೆಳಗಾವಿಯಿಂದ ಧಾರವಾಡದತ್ತ ಹೊರಟಿದ್ದ ಕಾರು ತಡರಾತ್ರಿ ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿಗಳು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಕಿತ್ತೂರು ಉತ್ಸವ ನೋಡಿ ಹಿಂದಿರುವಾಗ ಕಾರು ಡಿಕ್ಕಿ ಪಾದಚಾರಿಗಳ ಸಾವು
the authorTV24 News Desk
All posts byTV24 News Desk
Leave a reply









