Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ರಸ್ತೆ ಪಕ್ಕದ ಅಂಗಡಿಗಳನ್ನು ತೆರವುಗೊಳಿಸಿದ ಪೊಲೀಸರು

ಸಂಚಾರಿ ಪೊಲೀಸ ಹಾಗೂ ಪಾಲಿಕೆ ಅಧಿಕಾರಿಗಳ  ಮೇಲೆ ಬಿದಿ  ವ್ಯಾಪಾರಿಗಳ ಬೇಸರ 
 ಬೆಳಗಾವಿ: ನಗರದಲ್ಲಿ ನಿನ್ನೆ ಪೋರ್ಟರೋಡನಲ್ಲಿರುವ ಅಂಗಡಿಯವರು ಅತಿಕ್ರಮಣದಿಂದ ಇರಿಸಲಾದ ಬೋರ್ಡ ಹಾಗು ಕೆಲ ವಸ್ತುಗಳನ್ನು ಸಂಚಾರಿ ಪೊಲೀಸರು ಪಾಲಿಕೆಯವರ ಸಹಾಯದಿಂದ ವಶಕ್ಕೆ ಪಡೆದಿದ್ದರು. ಇಂದು  ಸಹಿತ  ಸಂಚಾರಿ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ತೆರವಿನ  ಕಾರ್ಯವನ್ನು ಮುಂದುವರೆಸಿದ್ದಾರೆ. ಬೆಳಗಾವಿ ಚೆನ್ನಮ್ಮ ವೃತ್ತದಿಂದ ಕಾಕತಿವೇಸ ರಸ್ತೆಯವರೆಗೆ ಬಿದಿಯಬದಿ ರಸ್ತೆಯಲ್ಲಿರುವ ವ್ಯಾಪಾರಿಗಳ ಅಂಗಡಿ ಮುಗಟ್ಟುಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಸಿಪಿಐ ವಿನಾಯಕ ಬಡಿಗೇರ ಮಾತನಾಡಿ  ನಾವು ಮೇಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ ಇಲ್ಲಿ ಹಲವು ವರ್ಷಗಳಿಂದ ಟ್ರಾಪಿಕ ಕಿರಿ ಕಿರಿ ಯಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ನಿಮಗೆ ಅಧಿಕೃತವಾಗಿ ಅಂಗಡಿ ಬೇಕಾದರೆ ಮಹಾನಗರ ಪಾಲಿಕೆ ನಿಯಮದಂತೆ  ಪರವಾನಿಗೆ ಪಡೆದುಕೊಳ್ಳಿ ಎಂದರು .
ಬಿದಿ  ವ್ಯಾಪಾರಿಗಳು ಮಾತನಾಡಿ ನಮ್ಮ ತಾಯಿಯವರು ಸುಮಾರು ೪೦ ವರ್ಷಗಳಿಂದ ಇಲ್ಲಿ ಅಂಗಡಿಗಳನ್ನು ಇಟ್ಟು ನಮ್ಮನ್ನೆಲ್ಲಾ ಸಾಕಿದ್ದಾರೆ ನಾವು ಯಾವದೇ ರೀತಿ ಭ್ರಷ್ಟಾಚಾರ ಮಾಡುತ್ತಿಲ್ಲ ದುಡಿದು ತಿನ್ನುವ ನಮ್ಮ ಮೇಲೆ ಈ ರೀತಿ ದೌರ್ಜನ್ಯ ಸರಿಯಲ್ಲ ನಾವು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದಿಲ್ಲ ನಾವು ಬಡುವರು ನಮ್ಮ ಕುಟುಂಬದವರು ನಮ್ಮನ್ನೆ ನಂಬಿರುತ್ತಾರೆ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ದಯಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಬೇಸರ ವ್ಯಕ್ತಪಡಿಸಿದರು .
TV24 News Desk
the authorTV24 News Desk

Leave a Reply

error: Content is protected !!