ರೈಲು ಸಂಚಾರದ ಸಮಯ, ಟಿಕೆಟ್ ದರದ ಕಂಪ್ಲೀಟ್ ಮಾಹಿತಿ
ಧಾರವಾಡ: ಇಂದು ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ದೇಶದ ಐದು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪಥಿ ರೈಲು ನಿಲ್ದಾಣದಿಂದ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸಿದರು. ಪ್ರಧಾನಿ ಮೋದಿ ಚಾಲನೆ ಬಳಿಕ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಸದ್ಯಕ್ಕೆ 530 ಆಸನಗಳನ್ನು ಒಳಗೊಂಡ 8 ಬೋಗಿಗಳನ್ನು ಹೊಂದಿದೆ. ಈ ರೈಲು 489 ಕಿಮಿ ಮಾರ್ಗವನ್ನು ಗಂಟೆಗೆ 110 ಕಿಮಿ ವೇಗದಲ್ಲಿ ಚಲಿಸುತ್ತದೆ.
ಈ ರೈಲು ಧಾರವಾಡ-ಬೆಂಗಳೂರು ಮಧ್ಯೆ ವಾರದಲ್ಲಿ ಆರು ದಿನ ಸಂಚರಿಸಲಿದೆ. ಇಂದು ಮಾತ್ರ ಹಲವು ಕಡೆ ನಿಲುಗಡೆಯಾಗಲಿದ್ದು, ನಾಳೆಯಿಂದ (ಜೂ.28) ಅಧಿಕೃತ ಸಂಚಾರ ಆರಂಭವಾಗಲಿದೆ. ಆಗ ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ.
ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್ ರೈಲಿನ ಸಮಯ
ರೈಲು ನಿಲ್ದಾಣ ಸಮಯ (28/06/2023)
ಬೆಂಗಳೂರು ಬೆಳಿಗ್ಗೆ 05:45
ಯಶವಂತಪುರ ಬೆಳಿಗ್ಗೆ 05: 57
ದಾವಣಗೆರೆ ಬೆಳಿಗ್ಗೆ 09:17
ಹುಬ್ಬಳ್ಳಿ ಬೆಳಿಗ್ಗೆ 11:35
ಧಾರವಾಡ ಮಧ್ಯಾಹ್ನ 12:10
ಧಾರವಾಡ ಮಧ್ಯಾಹ್ನ 1:35
ಹುಬ್ಬಳ್ಳಿ ಮಧ್ಯಾಹ್ನ 1:40
ದಾವಣಗೆರೆ ಮಧ್ಯಾಹ್ನ 3:40
ಯಶವಂತಪುರ ಸಾಂಯಕಾಲ 7:15
ಬೆಂಗಳೂರು ಸಾಯಂಕಾಲ 7: 45
ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್ ರೈಲಿನ ಟಿಕೆಟ್ ದರ
ರೈಲು ಸಂಖ್ಯೆ 20661
ರೈಲು ನಿಲ್ದಾಣ ಎಸಿ ಚೇರ್ (ರೂ) ಎಕ್ಸಿಕ್ಯೂಟಿವ್ ಕ್ಲಾಸ್ (ರೂ)
ಬೆಂಗಳೂರು-ಧಾರವಾಡ 1165 2010
ಬೆಂಗಳೂರು-ಹುಬ್ಬಳ್ಳಿ 1135 2180
ಬೆಂಗಳೂರು-ದಾವಣಗೆರೆ 915 1740
ದಾವಣಗೆರೆ-ಧಾರವಾಡ 535 1055
ರೈಲು ಸಂಖ್ಯೆ 20662
ರೈಲು ನಿಲ್ದಾಣ ಎಸಿ ಚೇರ್ (ರೂ) ಎಕ್ಸಿಕ್ಯೂಟಿವ್ ಕ್ಲಾಸ್ (ರೂ)
ಧಾರವಾಡ-ಬೆಂಗಳೂರು 1330 2440
ಹುಬ್ಬಳ್ಳಿ-ಬೆಂಗಳೂರು 1300 2375
ದಾವಣಗೆರೆ-ಬೆಂಗಳೂರು 860 1690
ಧಾರವಾಡ-ದಾವಣಗೆರೆ 745 1282
ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ದರವು ಊಟ ಮತ್ತು ತಿಂಡಿಗಳನ್ನು ಒಳಗೊಂಡಿರುತ್ತದೆ.