ಬೆಳಗಾವಿ:ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಶಾಲಾ ಮಕ್ಕಳು ಭಾಗಿಯಾಗಿದ್ದರು. 67ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕೋಟಿ ಕಂಠ ಗಾಯನ-೨೦೨೨ರನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಅಧೀಕ್ಷಕ ಸಂಜೀವ ಪಾಟೀಲ, ಬೆಳಗಾವಿ ಪೊಲೀಸ್ ಆಯುಕ್ತರಾದ ಎಂ ಬಿ ಬೋರಲಿಂಗಯ್ಯ ಹಾಗು ಅನೇಕ ಗಣ್ಯ ಮಾನ್ಯರು ಅಧಿಕಾರಿಗಳು ಸಾವಿರಾರು ಶಾಲಾ ಮಕ್ಕಳು ಭಾಗಿಯಾಗಿದ್ದರು, ಬೆಳಗಾವಿ ನಗರದ ಶಾಲಾ ಮಕ್ಕಳಿಗೆ ಕರೆ ತರಲು ಜಿಲ್ಲಾಡಳಿತವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು, ವಿಶೇಷವೆಂದರೆ ಬಸ್ ಚಾಲಕರು, ನಿರ್ವಾಹಕರು ಸಹ ಕುಣಿದು ಆನಂದಿಸಿದರು. ಇಂದು ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕೋಟಿ ಕಂಠ ಗಾಯನ-೨೦೨೨ರನ್ನು ಹಮ್ಮಿಕೊಳ್ಳಲಾಗಿತ್ತು.
tv24plus.in > Blog > ಜಿಲ್ಲೆ > ಬೆಳಗಾವಿ > ಬೆಳಗಾವಿಯಲ್ಲಿ ಕೋಟಿ ಕಂಠ ಗಾಯನ










