ಬೆಳಗಾವಿ:
ಬಿಟ್ಟೂ ಬಿಡದೆ ಸುರಿಯುತ್ತಿರುವ ಮುಂಗಾರಿನ ಅಬ್ಬರದ ಮಧ್ಯೆ ಕಾಡಂಚಿಣ ಗ್ರಾಮಗಳಿಗೆ ಹೆಸ್ಕಾಂ ಅಧಿಕಾರಿಗಳು ಶಾಕ್ ನೀಡಿದ್ದಾರೆ.ಕಳೆದ ನಾಲ್ಕು ದಿನಗಳಿಂದ ಖಾನಾಪುರದ ಕಾಡಂಚಿನ ಜನ ನಲುಗಿ ಹೋಗಿದ್ದಾರೆ. ನಾಲ್ಕು ದಿನಗಳಿಂದ ಕತ್ತಲಲ್ಲಿ ಬೆಳಗಾವಿಯ ಕಾಡಂಚಿನ ಗ್ರಾಮವಾಸಿಗಳು ವಾಸಿಸುತ್ತಿದ್ದು
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 25 ಕ್ಕೂ ಅಧಿಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಗಾಳಿ ಸಮೇತ ನಿರಂತರ ಮಳೆಯಾಗುತ್ತಿಧ.ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಕಾರಣಕ್ಕೆ ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಅನಾಹುತ ಆಗಬಾರದು ಎಂಬ ನೆಪ ಒಡ್ಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.ಹೈಸ್ಕಾಂ ಅಧಿಕಾರಿಗಳ ಮನಸ್ಸೋ ಇಚ್ಛೆ ನಿರ್ಧಾರಕ್ಕೆ ಕತ್ತಲೆಯಲ್ಲಿ ಕಾಲ ನಿವಾಸಿಗಳು ಕಾಲಕಳೆಯುತ್ತಿದ್ದಾರೆ.
ಖಾನಾಪುರ ತಾಲೂಕಿನ ಹಬ್ಬಾನಟ್ಟಿ, ಆಮಗಾಂವ, ಕಾಲಮನಿ ಸೇರಿ 25 ಗ್ರಾಮಗಳ ಸಂಪರ್ಕ ಕಡಿತಗೊಳಿಸಲಾಗಿದ್ದು
ಕತ್ತಲೆಯಲ್ಲಿ ಅಡುಗೆ ಮಾಡಿ ಜೀವನ ಮಾಡುವ ಪರಿಸ್ಥಿತಿಗೆ ಗ್ರಾಮಸ್ಥರು ಬಂದಿದ್ದಾರೆ. ಅಲ್ಲದೇ ಕ್ಯಾಂಡಲ್ ಬೆಳಕಲ್ಲಿಯೇ ಅಭ್ಯಾಸ ಮಾಡುವ ಸ್ಥಿತಿಗೆ ಮಕ್ಕಳು ಬಂದಿದ್ದಾರೆ.











