Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಧಾರವಾಡ

ಗ್ರಾಮಸ್ಥರು ಹಾಗು ಅರ್ಚಕನ ನಡುವೆ ಗಲಾಟೆ 

ಹುಬ್ಬಳ್ಳಿ:ಮಠದ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಅರ್ಚಕನ ನಡುವೇ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ  ನಡೆದಿದೆ.
ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದ  ಪ್ರಕಾಶ್ ಮುಳುಗಂದಮಠ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಇವರ ಕಾರ್ಯವೈಖರಿ ಬಗ್ಗೆ ಬೇಸತ್ತ ಗ್ರಾಮಸ್ಥರು ಅರ್ಚಕರನ್ನು ಪೂಜೆ ಮಾಡದಂತೆ ಹೇಳಿದ್ದಾರೆ.ಇವತ್ತು ಮಠದ ಪೂಜೆ ವಿಷಯವಾಗಿ ಗ್ರಾಮಸ್ಥರು ಅರ್ಚಕರ ನಡುವೆ ಮಾತಿಗೆ ಮಾತು ನಡೆದಿದೆ. ಇದು ವಿಕೋಪಕ್ಕೆ ತಿರುಗಿ
ದೇವಸ್ಥಾನದಲ್ಲಿಯೇ ಅರ್ಚಕೊಂದಿಗೆ ಗ್ರಾಮಸ್ಥರ ಗಲಾಟೆ ಮಾಡಿಕೊಂಡಿದ್ದಾರೆ. ಅರ್ಚಕ ಪ್ರಕಾಶ್ ಮುಳುಗಂದಮಠಗೆ ಥಳಿಸಿದ್ದಾರೆ. ಓಡೋಡಿ ಬಂದು ಹಾರಿ ಹಾರಿ ಒದ್ದು ಹಲ್ಲೆ ಮಾಡಿದ್ದಾರೆ.ಹಲ್ಲೆ ಮಾಡಿರೋ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಕಳೆದ ಹಲವು ವರ್ಷಗಳಿಂದ  ಪೂಜೆ ವಿವಾದ ನಡೆಯುತ್ತಿದೆ.ದೇವಸ್ಥಾನಕ್ಕೆ ಬೇರೆ ಅರ್ಚಕನನ್ನು ನೇಮಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಆದ್ರೆ ನಾನೇ ಪೂಜೆ ಮಾಡ್ತೀನಿ ಎಂದು  ಮುಳುಗಂದಮಠ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಹಲವು ಬಾರಿ ವಾಗ್ವಾದ ನಡೆದು ಇಂದು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇರೋ ವೇಳೆನೇ ಗ್ರಾಮಸ್ಥರು ಅರ್ಚಕರು ನಡುವೆ ಹೊಡೆದಾಡಿಕೊಂಡಿದ್ದಾರೆ. ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಗ್ರಾಮೀಣ ಪೊಲೀಸರು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
TV24 News Desk
the authorTV24 News Desk

Leave a Reply

error: Content is protected !!