ಮುಂಬೈ: ಕಳೆದ ರಾತ್ರಿ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಳೆದ ವರ್ಷ ತೆರೆಕಂಡು ಅಪಾರ ಯಶಸ್ಸು ಗಳಿಸಿದ ಕನ್ನಡದ ಚಿತ್ರ ಕಾಂತಾರ ಚಿತ್ರದ ನಟನೆ, ನಿರ್ದೇಶನಕ್ಕೆ ರಿಷಬ್ ಶೆಟ್ಟಿ ಅವರಿಗೆ 2023ನೇ ಸಾಲಿನ ಭರವಸೆಯ ನಟ ಪ್ರಶಸ್ತಿ ಸಿಕ್ಕಿದೆ.
ಕಾಂತಾರ ಚಿತ್ರವನ್ನು ನಿರ್ದೇಶಿಸಿ ನಟಿಸಿ ಡಿವೈನ್ ಸ್ಟಾರ್ ಎಂದು ಅಭಿಮಾನಿಗಳಿಂದ ಪ್ರೀತಿಯ ಬಿರುದು ಪಡೆದಿರುವ ರಿಷಬ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ,ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ನನ್ನನ್ನು ನಂಬಿ ಅವಕಾಶ ಕೊಟ್ಟಿದ ಹೊಂಬಾಳೆ ಫಿಲ್ಮ್ ಮತ್ತು ವಿಜಯ್ ಕಿರಗಂದೂರು ಸರ್ ಅವರಿಗೆ ಋಣಿಯಾಗಿರುವೆ. ನಿಮ್ಮ ಜೊತೆ ಕೈ ಜೋಡಿಸಿ ಹೆಚ್ಚು ಸಿನಿಮಾ ಮಾಡಲು ಕಾಯುತ್ತಿರುವೆ’ ಎಂದು ಹೇಳಿದ್ದಾರೆ.’ಕಾಂತಾರ ಇಡೀ ತಂಡದಿಂದ ಇದು ಸಾಧ್ಯವಾಗಿದ್ದು ಹೀಗಾಗಿ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆ ಎಂದು ಹೇಳಿದ್ದಾರೆ.