Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಹಿಂದೂ ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಕೇಂದ್ರದ ಸ್ಥಳಾಂತರ ಬೇಡ : ಜಿಲ್ಲಾಧಿಕಾರಿಗೆ ಮನವಿ

ಸಂಕೇಶ್ವರ ಸಮೀಪ ಇರುವ ಹಂಚಿನಾಳ ಗ್ರಾಮದ ರಸ್ತೆಯ ಮಧ್ಯದಲ್ಲಿ ಹಿಂದಿನಿಂದಲೂ ಇರುವ ಮುಸ್ಲಿಂ ಧಾರ್ಮಿಕ ಕೇಂದ್ರವಾದ ದರ್ಗಾವನ್ನು ಸ್ಥಳಾಂತರ ಮಾಡಬಾರದೆಂದು, ನ್ಯಾಯವಾದಿ ಹಾಜಿ ಗುಲಾಬ್ ಸಾಬ್ ಮುಲ್ಲಾ ಜೊತೆ ಮುಸ್ಲಿಂ ಭಾಂದವರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಹಂಚಿನಾಳ ಗ್ರಾಮದ ರಸ್ತೆಯ ಮಧ್ಯಯೇ ಇರುವ ,”ಹಜರತ್ ಸಯೀದ್ ಗುಲಾಬ್ ಷಾ ವಲಿ ದರ್ಗಾ”  ಸುಮಾರು 150 ವರ್ಷಗಳ ಹಿಂದಿನಿಂದಲೂ ಈ ದರ್ಗಾ ಇದ್ದು ಹಿಂದೂ ಮುಸ್ಲಿಂ ಧಾರ್ಮಿಕ ಭಾವೈಕ್ಯದ ಕೇಂದ್ರವಾಗಿ ಹೆಸರುವಾಸಿಯಾಗಿದ್ದು, ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಊರ್ಸ್ ಆಗುತ್ತೆ…
ಅದ್ದೂರಿಯಾಗಿ ನಡೆಯುವ ಈ ಉರ್ಸ್ ಆಚರಣೆಗೆ ಸಂಕೇಶ್ವರ ಹಾಗೂ ಹುಕ್ಕೇರಿ ಕಡೆಗಳಿಂದ ಹಲವಾರು ಹಿಂದೂ ಮುಸ್ಲಿಂ ಭಕ್ತರು ಆಗಮಿಸಿ ಪೂಜೆ ಪಾರ್ಥನೆ ಮಾಡುವರು..
ಇಂತಹ ಧಾರ್ಮಿಕ ಕೇಂದ್ರವನ್ನು ಇಂದು ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಸ್ಥಳಾಂತರ ಮಾಡುವ ನಿರ್ಣಯಕ್ಕೆ,  ಪ್ರೊಜೆಕ್ಟ್ ಡೈರೆಕ್ಟರ್ ನೇಷನಲ್ ಹೈವೇ ಧಾರವಾಡ ಇವರು ಬಂದಿದ್ದು, ಅದರಿಂದ ಅಲ್ಲಿರುವ ದರ್ಗಾ ಕಮಿಟಿಯವರಿಗೆ ಹಾಗೂ ಭಕ್ತರಿಗೆ ಚಿಂತೆಯುಂಟು ಮಾಡಿದೆ ಎಂದರು‌.
TV24 News Desk
the authorTV24 News Desk

Leave a Reply

error: Content is protected !!