


ಬೆಳಗಾವಿ:
ರಾಜಕೀಯ ಅಂದ್ರೇನೆ ಹಾಗೆ ಅದು ನಿಂತ ನೀರಲ್ಲ ಸದಾ ಹರಿಯುತ್ತಿರುತ್ತೆ. ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರೂ ಅಲ್ಲ ಶತ್ರುವೂ ಅಲ್ಲ ಎಂಬಂತ ಮಾತುಗಳನ್ನ ನಾವು ಕೇಳುತ್ತಲೇ ಇರುತ್ತೆವೆ.ಮೊನ್ನೆ ಮೊನ್ನೆಯಷ್ಟೆ ಒಬ್ಬರಿಗೊಬ್ಬರ ಮೇಲೆ ಮುಗಿ ಬಿದ್ದವರು ಎದುರಾದ ಬಳಿಕ ಪ್ರೀತಿಯಿಂದ ಮಾತನಾಡುವುದು. ಒಬ್ಬರಿಗೊಬ್ಬರು ಸಹೋದರರಂತೆ ಇದ್ದರೂ ಅಕ್ಕ ಪಕ್ಕ ಕುಳಿತರೂ ಮಾತನಾಡದೇ ಇರೋದನ್ನ ಗಮನಿಸಿರುತ್ತೆವೆ. ಅಂತಹ ಘಟನೆಗಳು ಬೆಳವಣಿಗೆಗಳು ಜಿಲ್ಲೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಬಾರಿ ಆಗಿವೆಯೂ ಸಹ. ಈ ಸುದ್ದಿಗೆ ಇಷ್ಟು ಪೀಠಿಕೆ ಬರೆಯಲು ಕಾರಣ ಎನೆಂದರೆ ಮೊನ್ನೆಯಷ್ಟೆ ಹುಕ್ಕೇರಿಯ ವಿಶ್ವರಾಜ್ ಭವನದಲ್ಲಿ ರಮೇಶ ಕತ್ತಿ ತಮ್ಮ ಬೆಂಬಲಿಗರ ಸಭೆ ನಡೆಸಿ ಹುಕ್ಕೇರಿ ತಾಲೂಕಿನಲ್ಲಿ ಬೇರೊಬ್ಬರು ಕಾಲಿಡಲು ಬಿಡಲ್ಲ.ಹುಕ್ಕೇರಿ ತಾಲೂಕು ಆಳಲು ಬೇರೊಬ್ಬನ್ನು ಬಿಡುವ ಮಾತೇ ಇಲ್ಲ ಎಂಬ ಮಾತುಗಳನ್ನಾಡಿದ್ದರು
ಅಲ್ಲದೆ ತಾವೂ ಸೇರಿ ತಮ್ಮ ಅಣ್ಣನ ಮಗ ನಿಖಿಲ್ ಕತ್ತಿ ತಮ್ಮಿಬ್ಬರ ಮಕ್ಕಳನ್ನೂ ಸೇರಿಸಿಕೊಂಡು ಹುಕ್ಕೇರಿಯ ನಾಲ್ಕು ದಿಕ್ಕುಗಳಲ್ಲಿ ನಾವು ನಾಲ್ಕು ಜನ ನಿಲ್ಲುತ್ತೆವೆ ಯಾರಿಗೂ ಆಳಲು ಬಿಡಲ್ಲ ನಿಮ್ಮ ಸೇವಕರಾಗಿ ಇರುತ್ತೆವೆ ಎಂದು ಮಾತನಾಡಿದ್ದರು. ಇದನ್ನು ಮಾಧ್ಯಮಗಳು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರ ಬಳಿ ಪ್ರಶ್ನೆ ಮಾಡಿದಾಗ ರಮೇಶ್ ಕತ್ತಿಯವರಿಗೆ ಇರುವ ಅರ್ಜನ್ಸಿ ನನಗಿಲ್ಲ.ಸಮಯ ಬಂದಾಗ ರಮೇಶ ಕತ್ತಿಯವರಿಗೆ ಉತ್ತರ ಕೊಡುತ್ತೆನೆ ಎಂದಿದ್ದರು. ಅಲ್ಲದೆ ತಾವೊಬ್ಬ ಆಯುರ್ವೇದ ವೈದ್ಯ ನಮ್ಮ ಔಷಧ ಸ್ಲೋವಾಗಿ ವರ್ಕ್ ಆಗುತ್ತೆ ಅಂತಲೂ ಸಹ ಸಚಿವರು ಹೇಳಿದ್ದರು. ಈ ತತ್ವಿರುದ್ಧದ ಹೇಳಿಕೆಗಳು ಮಾಧ್ಯಮಗಳಲ್ಲಿ ಇನ್ನೂ ಹಸಿಹಸಿಯಾಗಿರುವಾಗಲೇ ಸಧ್ಯ ಹೇಳಿಕೆ ನೀಡಿದ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದ ದಕ್ಷಿಣ ಭಾರತದ 103 ನೇ ಜೈನ ಸಭೆ ಮತ್ತು ತ್ರೈವಾರ್ಷಿಕ ಅಧಿವೇಶನದಲ್ಲಿ ಇಬ್ಬರೂ ನಾಯಕರು ಅಕ್ಕ ಪಕ್ಕವೇ ಕುಳಿತು ಮಾತನಾಡಿಕೊಂಡಿದ್ದಾರೆ. ಮೊನ್ನೆ ಹುಕ್ಕೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದ ಮಾತುಗಳನ್ನ ಜನ ಮಾಧ್ಯಮಗಳ ಮೂಲಕ ಆಲಿಸಿದ್ದಾರೆ. ಅಲ್ಲದೇ ನಿನ್ನೆಯಷ್ಟೆ ಸತೀಶ ಜಾರಕಿಹೊಳಿಯವರು ಸಮಯ ಬಂದಾಗ ರಮೇಶ ಕತ್ತಿಯವರಿಗೆ ಉತ್ತರ ನೀಡುತ್ತೆನೆ ಎಂದಿದ್ದನ್ನೂ ಸಹ ನೋಡಿದ್ದಾರೆ. ಆದರೆ ಇಂದು ಕಾಕತಾಳಿಯವೆಂಬಂತೇ ಜೈನ ಸಮುದಾಯದ ಸಭೆಯಲ್ಲಿ ನಾಯಕರಿಬ್ಬರೂ ಒಬ್ಬರ ಪಕ್ಕದಲ್ಲಿ ಮತ್ತೊಬ್ಬರು ಕುಳಿತು ಮಾತನಾಡಿಕೊಂಡಿದ್ದನ್ನೂ ಸಹ ಜನ ಗಮನಿಸುತ್ತಿದ್ದಾರೆ. ರಾಜಕೀಯವೆಂದರೇ ಬಹುಷಹ ಹೀಗೆ ಎನಿಸುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.