ಬೆಳಗಾವಿಬೆಳಗಾವಿ ನಗರ

ಮನೆಯಿಂದ ಹೋದವಳು ವಾಪಾಸ್ ಬಂದೆಯಿಲ್ಲ ..!

ಬೆಳಗಾವಿ : ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದ ಮಹಿಳೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಕುರಿತು ಇಲ್ಲಿನ ಖಡೇಬಜಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದ ಟೌನ್‌ಶಿಫ್‌ ನಿವಾಸಿ ಕಾಶಿಮಬಿ ಮುನ್ನಾ ನವಲೂರು (46) ಕಾಣೆಯಾದ ಮಹಿಳೆ. ಬೆಳಗಾವಿ ನಗರದಲ್ಲಿ ವಾಸವಾಗಿರುವ ಸಹೋದರ ಮನೆಗೆ ಆಗಮಿಸಿದ್ದ ಕಾಶಿಮಬಿ ನವಲೂರು ಆ.30 ರಂದು ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಂದಿಲ್ಲ. ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಹಾಗೂ ಸಂಬಂಧಿಕರನ್ನು ವಿಚಾರಿಸಿದರೂ ಕಾಣೆಯಾದ ಮಹಿಳೆಯ ಸುಳಿವು ಸಿಕ್ಕಿಲ್ಲ ಎಂದು ಕಾಣೆಯಾದ ಕಾಶಿಮಬಿ ನವಲೂರು ಸಹೋದರ ಮಲಿಕ ಮುಲ್ಲಾ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಕಾಶಿಮಬಿ ನವಲೂರು 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿಗೆಂಪು ಮೈಬಣ್ಣ, ಉದ್ದಮುಖ, ಅಗಲ ಹಣೆ, ಅಗಲ ಮೂಗು ಹೊಂದಿದ್ದಾಳೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣ ಹೂವಿನ ಡಿಸೈನ್‌ ಚೂಡಿದಾರ ಧರಿಸಿದ್ದಾಳೆ. ಹಿಂದಿ, ಕನ್ನಡ, ಉರ್ದು ಭಾಷೆ ಬಲ್ಲವಳಾಗಿದ್ದಾಳೆ.ಈ ಮಹಿಳೆ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣ ಖಡೇಬಜಾರ ಪೊಲೀಸ್‌ ಠಾಣೆ ದೂರವಾಣಿ ಸಂಖ್ಯೆ-08312405232, ಪೊಲೀಸ್‌ ಇನಸ್ಪೆಕ್ಟ್‌ರ ಮೊ.9480804050ಗೆ ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

TV24 News Desk
the authorTV24 News Desk

Leave a Reply