Uncategorized

ವಿಷ ಕುಡಿದು  ಮಹಿಳೆ ಜೊತೆ ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ರಾಮದುರ್ಗ : ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಅಕ್ಟೋಬರ್‌ 6ರಂದು ಮನೆಯಿಂದ ಹೋದ ಇಬ್ಬರೂ ವಾಪಸ್ಸು ಬಂದಿರಲಿಲ್ಲ. ನಿನ್ನೆ ಸಂಜೆ ರೈತರೊಬ್ಬರ ಕಬ್ಬಿನ ಹೊಲದಲ್ಲಿ ಶವಗಳು ದೊರೆತಿದ್ದು, ಕೊಳೆತ ವಾಸನೆ ಬಂದಿತು. ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಕಂಕಣವಾಡಿಯ ಮಂಜುಳಾ ಪಾಟೀಲ (33) ಹಾಗೂ ಉಮೇಶ  ಹಣಮನೇರ (23) ಎಂದು ತಿಳಿದುಬಂದಿದೆ.

ಇನ್ನು ಘಟನೆ ಹಿನ್ನೆಲೆಯ ಗಮನಿಸುವುದ್ದಾರೇ ಉಮೇಶ ಹಾಗೂ ಮಂಜುಳಾ ಇಬ್ಬರಿಗೂ ಬೇರೆ ಬೇರೆ ಕಡೆ ಮದುವೆಯಾದ ಬಳಿಕವೂ ಪ್ರೇಮ ಸಂಬಂಧವಿತ್ತು. ಮಂಜುಳಾಗೆ ಪುತ್ರಿ (13) ಹಾಗೂ ಪುತ್ರ (9) ಇದ್ದಾರೆ. ಉಮೇಶನಿಗೂ ಕಳೆದ ವರ್ಷ ಮದುವೆಯಾಗಿದ್ದು, ಪತ್ನಿ ತುಂಬು ಗರ್ಭಿಣಿಯಾಗಿದ್ದಾರೆ.

ಟಂಟಂ ಓಡಿಸುತ್ತಿದ್ದ ಉಮೇಶ ಹಾಗೂ ಮಂಜುಳಾ ನಡುವೆ ಕೆಲ ವರ್ಷಗಳಿಂದ ಸಲುಗೆ ಬೆಳೆದಿತ್ತು. ಈ ವಿಷಯ ಎರಡೂ ಮನೆಯವರಿಗೆ ಗೊತ್ತಾಗಿ, ಬುದ್ಧಿಮಾತು ಹೇಳಿದ್ದರು. ಇದರಿಂದ ಸಂಬಂಧ ಬಯಲಾಯಿತು ಎಂದು ಮನನೊಂದು ಇಬ್ಬರೂ ಜೊತೆಗೂಡಿ ಮನೆ ಬಿಟ್ಟು ಹೋಗಿದ್ದರು.ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ವಿಷ ಕುಡಿದು ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಅನೈತಿಕ ಸಂಬಂಧದ ಕಾರಣ ನಡೆದ ಜೋಡಿ ಆತ್ಮಹತ್ಯೆ ಎಂಬ ಸಂಶಯ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

 

 

TV24 News Desk
the authorTV24 News Desk

Leave a Reply