Uncategorized

ಬೆಳಗಾವಿಯ ನಾಲ್ವರು ಹಿರಿಯ ವರದಿಗಾರರಿಗೆ ‘ಪತ್ರಿಕಾ ರತ್ನ ಪ್ರಶಸ್ತಿ’!

ಬೆಳಗಾವಿ:

ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಇಂದು ಸಂಜೆ ನಡೆದ “ರಫಿ ಕೆ ರಂಗ್ ರಿಯಾಜ್ ಕೆ ಸಂಗ್” 13ನೇ ಆವೃತ್ತಿ ಕಾರ್ಯಕ್ರಮ ಮಧುರವಾಗಿ ಮೂಡಿ ಬಂತು. ಗೋಕಾಕದ ಹಿರಿಯ ಕಲಾವಿದ ರಿಯಾಜ್ ಚೌಗಲಾ ನೇತೃತ್ವದ ಮಾಡರ್ನ್ ಮಲೊಡೀಸ್ ಆರ್ಕೇಸ್ಟ್ರಾ ತಂಡದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸದಾ ಸಮಾಜದ ಒಳಿತಿಗಾಗಿ ಶ್ರಮಿಸುವ ಮತ್ತು ಸಮಾಜ ಸರ್ಕಾರದ ತಪ್ಪುಗಳನ್ನು ತಿದ್ದುವ ಹಿರಿಯ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಬೆಳಗಾವಿಯ ನ್ಯೂಸ್ ಫಸ್ಟ್ ಹಿರಿಯ ವರದಿಗಾರ, ಶ್ರೀಕಾಂತ ಕುಬಕಡ್ಡಿ, ಹಾಗೂ ಬೆಳಗಾವಿಯ ನ್ಯೂಸ್-18 ಹಿರಿಯ ವರದಿಗಾರ  ಚಂದ್ರಕಾಂತ ಸುಗಂಧಿ, ತರುಣಭಾರತ ದಿನಪತ್ರಿಕೆ ಮುಖ್ಯ ವರದಿಗಾರರಾದ ಮನಿಷಾ ಸುಬೇದಾರ, ಘಟಪ್ರಭಾದ ಸಯ್ಯದ್ ಅವರಿಗೆ ‘ಪತ್ರಿಕಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂಧರ್ಬದಲ್ಲಿ ಗಾಯಕ ರಿಯಾಜ್ ಚೌಗಲಾ,ಲಕ್ಷ್ಮಣರಾವ್ ಚಿಂಗಳೆ,ವೈದ್ಯ ಗಿರೀಶ್ ಸೋನವಾಲ್ಕರ್, ಹಾಗೂ ಧುರೀಣ ಕಿರಣ್ ರಜಪೂತ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.

TV24 News Desk
the authorTV24 News Desk

Leave a Reply

error: Content is protected !!