

ಬೆಳಗಾವಿ:
ಇಡಿ ದಾಳಿ ಹಾಗೂ ಅದರ ವಿಚಾರಣೆಯ ಭೀತಿಯ ನಡುವೆಯೂ ಸಹ ಸಚಿವ ಸತೀಶ್ ಜಾರಕಿಹೊಳಿಯವರು ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆಯಲಿರುವ ಕೆಡಪಿ ಸಭೆಗೆ ಹಾಜರಾಗಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯ ಸುವರ್ಣಸೌಧಕ್ಕೆ ಹೆಲಿಕಾಪ್ಟರ್ ಮೂಲಕ ಕೆಡಿಪಿ ಸಭೆಗೆ ಆಗಮಿಸಿದರು. ಸುವರ್ಣಸೌಧದಲ್ಲಿರುವ ವಿಶೇಷ ಹೆಲಿಪ್ಯಾಡ್ ಗೆ ಆಗಮಿಸಿದ ಅವರನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಅಧಿಕಾರಿಗಳು ಸ್ವಾಗತಿಸಿದರು. ಗೋಕಾಕನಿಂದ ಬೆಳಗಾವಿ ಸುವರ್ಣಸೌಧಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಗೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಸಾಥ್ ನೀಡಿದರು.ಇಡಿ ದಾಳಿ ಬಳಿಕವೂ ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕ, ಸರ್ಕಾರಿ ಸಭೆ, ಕಾರ್ಯಕ್ರಮದಲ್ಲಿ ಸತೀಶ ಭಾಗಿಯಾಗುತ್ತಿದ್ದು ಇಂದು ಬೆಳಗಾವಿಯಲ್ಲಿ ವಾಸ್ತವ್ಯವನ್ನು ಸತೀಶ್ ಹೂಡಲಿದ್ದು ನಾಳೆ ಬೆಂಗಳೂರಿಗೆ ಸತೀಶ್ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.










