ಬೆಳಗಾವಿ: ಮಾನ್ಸೂನ್ ಋತುವಿನಲ್ಲಿ ಪ್ರವಾಸ ಹೋಗುವುದೆಂದರೆ ಹಲವರಿಗೆ ಖುಷಿ, ಹೊರಗೆ ಮಳೆಯ ಧಾರೆ, ಚಳಿಯ ವಾತಾವರಣ ಆಹ್ಲಾದಕರ ಅನುಭವ ಕೊಡುತ್ತವೆ.
ಮಳೆಗಾಲದಲ್ಲಿ ಹೋಗಬೇಕಾದ ಕೆಲವು ವಿಶೇಷ ತಾಣಗಳಿರುತ್ತವೆ. ಅಂತವುಗಳಲ್ಲಿ ಒಂದು ಅಂಬೋಲಿ ಜಲಪಾತ. ಬೆಳಗಾವಿ ಜಿಲ್ಲೆಯ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಅಂಬೋಲಿ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗಸುಖ. ಆದರೆ ಈಗ ಆಹ್ಲಾದಕರ ಅನುಭವ ಪಡೆಯಲು ಜಾರ್ಜ್ ಕೊಡಬೇಕು. ಇಲಾಖೆ ನಿಗಧಿ ಪಡಿಸಿದ ಹಾಗೆ ಕನಿಷ್ಠ 5 ವರ್ಷದ ಮಕ್ಕಳಿಗೆ 10 ರೂ ಹಾಗೂ 14 ವಯಸ್ಸು ಮೇಲ್ಪಟ್ಟವರಿಗೆ 20 ರೂ ಟಿಕೆಟ್ ಶುಲ್ಕ್ ಅರಣ್ಯ ಇಲಾಖೆಗೆ ಜುಲೈ 8 ರಿಂದ ಪಾವತಿಸಬೇಕಂದು ಸಾವಂತವಾಡಿ ಉಪ ಅರಣ್ಯ ಸಂರಕ್ಷಕ ಎಸ್ ನವಕಿಶೋರ ರೆಡ್ಡಿ ಅವರು ತಿಳಿಸಿದ್ದಾರೆ. ಪ್ರವಾಸಿಗರು ಪಾವತಿಸದ ಶುಲ್ಕದಿಂದ ಜಲಪಾತ ಅಭಿವೃದ್ಧಿಗೆ ಸಹಕಾರ ವಾಗಲಿದೆಯೆಂದು ರೆಡ್ಡಿಯವರು ಹೇಳಿದ್ದಾರೆ