ಬೆಳಗಾವಿ:
ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ ವಿಚಾರಕ್ಕೆ
ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ
ನಾಗೇಂದ್ರ ರಾಜೀನಾಮೆ ಕೊಟ್ಟಾಯ್ತು, ವಿಚಾರ ಕ್ಲೋಸ್ ಆಯ್ತು ನಾಗೇಂದ್ರ ಪ್ರಕರಣ ಪಕ್ಷಕ್ಕೆ ಮುಜುಗರ ಆಗಿದೇ
ರಾಜೀನಾಮೆ ಕೊಟ್ಟಿದ್ದರಿಂದ ಚರ್ಚೆ ಅನವಶ್ಯಕ.ನಾಗೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಬರುವುದಿಲ್ಲ.ನಮಗೆಲ್ಲ ಐದು ವರ್ಷಕ್ಕೆ ಜನ ಆಯ್ಕೆ ಮಾಡಿದ್ದಾರೆ ನಾಗೇಂದ್ರ ರಾಜೀನಾಮೆ ಪಕ್ಷದ ತೀರ್ಮಾನವಾಗಿದ್ದು ವಾಲ್ಮೀಕಿ ಹಗರಣ ವಿಚಾರ ಎರಡು ವರ್ಷಗಳ ಹಿಂದೆಯೇ ಮುಗಿದಿದೆ.ನಾಗೇಂದ್ರ ಸ್ಥಾನವನ್ನ ವಾಲ್ಮೀಕಿ ಸಮಾಜಕ್ಕೆ ಕೊಟ್ಟೇ ಕೊಡ್ತಾರೆ ಯಾವಾಗ ಯಾರಿಗೆ ಕೊಡಬೇಕು ಅನ್ನೋದನ್ನ ಪಕ್ಷವೇ ತೀರ್ಮಾನ ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಇನ್ನು
ಮಾಧ್ಯಮದವರು ಕೇಳಿದ ತಮ್ಮ ಡಿಸಿಎಂ ಸ್ಥಾನದ ಕುರಿತ ಪ್ರಶ್ನೆಗೆ ತಮಗೆ ಡಿಸಿಎಂ ಸ್ಥಾನ ನೀಡುವ ಕುರಿತು ದೆಹಲಿ ಪ್ರವಾಸದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದರು.ಇನ್ನು ಸಿದ್ದರಾಮಯ್ಯ ಮನಸ್ಸು ಮಾಡಿದ್ರೇ ನೀವು ಡಿಸಿಎಂ ಆಗತ್ತಿದ್ದರೀ ಎಂಬ ಪ್ರಶ್ನೆಗೆ ಉತ್ತರಿಸಿ ಅದರಲ್ಲಿ ಏನಿದೇ ಹಿಂದೆಯೂ ಒಬ್ಬರೇ ಇದ್ದರೂ ಈಗಲೂ ಒಬ್ಬರೇ ಇದ್ದಾರೆ.ನಾವು ಮುಂಚೆಯೂ ಡಿಸಿಎಂ ಇಲ್ಲ, ಈಗಲೂ ಇಲ್ಲ ಡಿಸಿಎಂ ಆಗಲೂ ಸಾಕಷ್ಟು ಜನ ಆಕಾಂಕ್ಷಿ ಇದ್ದಾರೆ.ಡಿಸಿಎಂ ಕೊಟ್ಟರೆ ಯಾರಾದರೂ ಬಿಡ್ತಾರಾ, ಎಲ್ಲರೂ ಆಗ್ತಾರೇ ಅದಕ್ಕೂ ಟೈಮ್ ಬರುತ್ತೆ.ಇನ್ನೂ ಎರಡು ಸಲ ಚುನಾವಣೆ ಸ್ಪರ್ಧೆ ಮಾಡ್ತಿವಿ ನಾಲ್ಕು ಐದು ಜನರನ್ನ ಡಿಸಿಎಂ ಮಾಡಿದ್ರೆ ಅದಕ್ಕೆ ಮಹತ್ವ ಇರುವುದಿಲ್ಲ ಅಂತಾ ಮಾಡಿಲ್ಲ. ಸಿದ್ದರಾಮಯ್ಯ ಪುತ್ರ ಮೋಹದಿಂದ ಡಿಸಿಎಂ ಕೈತಪ್ಪಿತ್ತಾ ಪ್ರಶ್ನೆ ಗೆ ಅವರೇ ಅವರ ಮಗನಿಗೆ ಡಿಸಿಎಂ ಮಾಡಿದ್ರಾ ಅವರ ಮಗನಿಗೆ ಮಂತ್ರಿ ಮಾಡಿದ್ದಾರೆ ಅಷ್ಟೇ ಎಂದರು. ಇನ್ನು ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ರಮೇಶ್ ಜಾರಕಿಹೊಳಿ ಎಷ್ಟನೇ ಬಾರಿ ಭೇಟಿ ಆಗೋದು ಅವರು
ಆರು ತಿಂಗಳಿಗೊಮ್ಮೆ ಭೇಟಿ ಮಾಡ್ತಾರೆ ರಮೇಶ್ ಭೇಟಿ ಹೊಸದಾಗಿ ಏನು ಇಲ್ಲ ಇದರಲ್ಲಿ ಯಾವುದೇ ವಿಶೇಷ ಇಲ್ಲ.ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ವಿಚಾರಕ್ಕೆ ಒಂದು ಟ್ಯಾಕ್ಸ್ ಮಾಡಬೇಕು ಅಂದ್ರೆ ನಿಯಂತ್ರಣ ಆಗುತ್ತೇ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಡಿಸ್ಟರ್ಬ್ ಆಗೋ ಪ್ರಶ್ನೆ ಇಲ್ಲ.ಡಿಕೆಶಿ ಸರ್ಕಾರ ಸುಭದ್ರವಾಗಿಯೇ ಇರುತ್ತೆ ಎಂದರು.ಇನ್ನು ಮಹಿಳಾ ಮಂತ್ರಿ ಯಾರೂ ಇಲ್ಲ ಪ್ರಶ್ನೆಗೆ ಉತ್ತರಿಸಿದರ ಅವರು ಒಂದು ಇದ್ದದ್ದೂ ಎರಡು ಸ್ಥಾನ ಆಗಿದೆ.ಮಹಿಳಾ ಮಂತ್ರಿಯನ್ನ ಮಾಡ್ತಾರೆ ಅದು ಸರ್ಕಾರ, ಪಕ್ಷಕ್ಕೆ ಬಿಟ್ಟಿದ್ದು ಯಾರನ್ನ, ಯಾವಾಗ ಮಾಡಬೇಕು ಅನ್ನೋದನ್ನ ನಾವು ಆದಷ್ಟು ಬೇಗ ಮಾಡಲು ಹೇಳಿದ್ದೇವೆ ಎಂದು ಜಾರಕಿಹೊಳಿ ಹೇಳಿದರು.











