ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಗ್ನೀಶ್ವರನ ಕಾಯದೆ ವಿಘ್ನೇಶ್ವರ ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ಬೆಳಗಾವಿ:

ಶಾರ್ಟ್ ಸರ್ಕ್ಯೂಟ್ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ನಡೆದಿದೆ. ಬೆಳಗಾವಿವ ಚಾವ್ಹಾಟ್ ಗಲ್ಲಿಯಲ್ಲಿ ತಡರಾತ್ರಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು ಶಾರ್ಟ್ ಸರ್ಕ್ಯೂಟ್ ದಿಂದ ಬೆಂಕಿ‌ ಹೊತ್ತಿ ದಮೋನೆ ಕುಟುಂಬದ ನಾಲ್ವರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ದಾನೋನೆ ಕುಟುಂಬ ಜೀವನ ಸಾಗಿಸುತ್ತಿತ್ತು ಎಂದು ತಿಳಿದು ಬಂದಿದ್ದು ಮನೆಯಲ್ಲಿ ಹೊತ್ತಿಕೊಂಡ ಬೆಂಕಿಗೆ ಕುಟುಂಬವೇ ಸುಟ್ಟು ಭಸ್ಮವಾಗಿದೆ.ಗಣೇಶ ಚತುರ್ಥಿ ದಿನವೇ ಒಂದೇ ಕುಟುಂಬದ ನಾಲ್ವರ ದಾರುಣ ಸಾವಾಗಿದ್ದು
ಘಟನೆಯಲ್ಲಿ ಶಾರದಾ ದಮೋನೆ (45)ಭಾರತಿ ದಮೋನೆ(50), ಪ್ರಿಯಾ ದಮೋನೆ(28), ಭಾರತಿ ಗಂಗಾ ದಮೋನೆ(25) ಪ್ರಿಯಾ ಗಜಾನನ ದಮೋನೆ(28) ಸಾವನ್ನಪ್ಪಿದ್ದರೆ ಗಜಾನನ ದಮೋನೆ(65) ಗಂಭೀರ ಗಾಯ ರೋಷನ್ ದಾಮೋನೆ(21) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತರ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.

TV24 News Desk
the authorTV24 News Desk

Leave a Reply

error: Content is protected !!