ಬೆಳಗಾವಿ:
ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿಯವರು ಡಿಸಿಎಂ ಆಗ್ತಾರಾ ಎಂಬ ಚರ್ಚೆ ಜೋರಾಗಿದೆ.ಸಂಪುಟ ವಿಸ್ತರಣೆ ಸರ್ಕಸ್ ಮಧ್ಯೆಯೇ ಅಭಿಮಾನಿಗಳ ಫೋಸ್ಟುಗಳು ವೈರಲ್ ಆಗುತ್ತಿವೆ.ಸತೀಶ್ ಜಾರಕಿಹೊಳಿಗೆ ಅಭಿನಂದಿಸಿ ಅಭಿಮಾನಿಗಳು ಫೋಸ್ಟ್ ಮಾಡುತ್ತಿದ್ದಾರೆ.ಉಪಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಸತೀಶ್ ಜಾರಕಿಹೊಳಿಗೆ ಅಭಿನಂದನೆ ಎಂದು ಪೋಸ್ಟ್ ಹಾಕುತ್ತಿದ್ದು ಇದು ತೀವ್ರ ಕುತೂಹಲ ಮೂಡಿಸಿದೆ.ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಡಿಸಿಎಂ ಹುದ್ದೆಗೆ ಸತೀಶ್ ಜಾರಕಿಹೊಳಿ ಕಸರತ್ತು ನಡೆಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಈ ಹುದ್ದೆಗೆ ಸಚಿವ ಸತೀಶ್ ಜಾರಕಿಹೊಳಿ ಲಾಬಿ ಮಾಡಿದ್ದರು.ಈಗ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಮೊದಲ ಹಂತದಲ್ಲಿಯೇ ಸಚಿವರಾಗಿ ಸತೀಶ್ ಜಾರಕಿಹೊಳಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಂಪುಟ ವಿಸ್ತರಣೆ ವೇಳೆ ಇನ್ನೆರಡು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದ್ದು ಈ ಎರಡು ಹುದ್ದೆ ಕಿತ್ತೂರು ಕರ್ನಾಟಕ ಭಾಗದ ನಾಯಕರಿಗೆ ನೀಡುವ ಬಗ್ಗೆ ಚರ್ಚೆ ಜೋರಾಗಿದೆ.ಲಿಂಗಾಯತ ಸಮಾಜದ ನಾಯಕ, ಅಹಿಂದಾ ನಾಯಕನಿಗೆ ಈ ಹುದ್ದೆ ಸಿಗುತ್ತೆ ಎಂಬ ಚರ್ಚೆ ಜೋರಾಗಿದೆ.
ಕಿತ್ತೂರು ಕರ್ನಾಟಕ ಭಾಗದ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲರಿಗೆ ಈ ಹುದ್ದೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಚರ್ಚೆ ಬೆನ್ನಲ್ಲೇ ಕುತೂಹಲ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಫೋಸ್ಟ್ ಕುತೂಹಲ ಮೂಡಿಸಿದೆ.
ಸೋಮವಾರವೇ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು ಎಲ್ಲರ ಕಣ್ಣು ಪ್ರಮಾಣ ವಚನ ನಡೆಯುವ ಕಾರ್ಯಕ್ರಮದ ಮೇಲಿದೆ.











