ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕೆಡಿಪಿ ಸಭೆಗೆ ಶಾಸಕ ಮಹಾಷಯರು ಗೈರು! 18 ರಲ್ಲಿ ಐವರು ಮಾತ್ರ ಹಾಜರು!

ಬೆಳಗಾವಿ:

ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಡಿಪಿ ಸಭೆಗೆ ಶಾಸಕರು ಗೈರಾಗಿದ್ದಾರೆ.ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ನಡೆಯುತ್ತಿರುವ 2026-27ನೇ ಸಾಲಿನ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿದೆ ಈ ಸಭೆಗೆ ಬಹುತೇಕ ಶಾಸಕರು ಗೈರಾಗಿದ್ದು, 18 ಶಾಸಕರ ಪೈಕಿ ಐವರು ಶಾಸಕರು ಮಾತ್ರ ಹಾಜರಾಗಿದ್ದರು.ಕೆಡಿಪಿ ಸಭೆಯಲ್ಲಿ ಶಾಸಕರಾದ ಮಹಾಂತೇಶ ಕೌಜಲಗಿ, ಆಸೀಫ್ ಸೇಠ್,ಬಾಬಾಸಾಹೇಬ್ ಪಾಟೀಲ, ವಿಶ್ವಾಸ ವೈದ್ಯ, ದುರ್ಯೋಧನ ಐಹೊಳೆ, ಎಂಎಲ್ಸಿ ನಾಗರಾಜ್ ಯಾಧವ್ ಭಾಗಿಯಾಗಿದ್ದು ಸಚಿವ ಲಕ್ಷ್ಮಣ ಸವದಿ, ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ,ನಿಖಿಲ್ ಕತ್ತಿ,ಶಶಿಕಲಾ ಜೊಲ್ಲೆ, ಅಶೋಕ ಪಟ್ಟಣ್, ವಿಠ್ಠಲ್ಲ ಹಲಗೇಕರ್, ಮಹೇಂದ್ರ ತಮ್ಮನ್ನವರ, ಅಭಯ್ ಪಾಟೀಲ, ರಾಜು ಕಾಗೆ,ಗಣೇಶ ಹುಕ್ಕೇರಿ ಗೈರುಸಂಸದರಾದ ಜಗದೀಶ್ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ, ಎಂಎಲ್ಸಿ ಪ್ರಕಾಶ ಹುಕ್ಕೇರಿ, ಚೆನ್ನರಾಜ್ ಹಟ್ಟಿಹೊಳಿ ಸಹ ಗೈರಾಗಿದ್ದಾರೆ.
ಕೃಷಿ ಇಲಾಖೆ, ತೋಟಗಾರಿಕೆ, ಆಹಾರ ಇಲಾಖೆ,ಆರೋಗ್ಯ, ಸೇರಿದಂತೆ ವಿವಿಧ ಇಲಾಖೆಗಳ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಕುಡಿಯುವ ನೀರು, ಮಳೆ ಕೊರತೆ ಬಗ್ಗೆ ಮಾಹಿತಿಯನ್ನು ಸಚಿವ ಸತೀಶ್ ಜಾರಕಿಹೊಳಿ ಪಡೆಯುತ್ತಿದ್ದಾರೆ.ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಬರದ ಛಾಯೆ
ಆದ್ರೂ ಕೆಡಿಪಿ ಸಭೆಗೆ ಹಾಜರಾಗಿ ಕ್ಷೇತ್ರದ ಸಮಸ್ಯೆ ಬಗ್ಗೆ ಗಮನ ಸೆಳೆಯುವಲ್ಲಿ ಶಾಸಕರು ವಿಫಲರಾಗಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!