ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

ಇಡಿ ದಾಳಿ ಅಂತ್ಯ ಸತೀಶ್ ಸುದ್ದಿಗೋಷ್ಠಿಯತ್ತ ಎಲ್ಲರ ಚಿತ್ತ!

ಬೆಳಗಾವಿ:

ರಾಜ್ಯ ಸರ್ಕಾರದ ಪ್ರಭಾವಿ ಸಚಿವರಲ್ಲೊಬ್ಬರಾದ ಸತೀಶ್ ಜಾರಕಿಹೊಳಿಯವರ ಮನೆಯ ಮೇಲಿನ ಇಡಿ ದಾಳಿ ಇಂದು ಅಂತ್ಯಗೊಂಡಿದೆ. ನಿನ್ನೆ ಬೆಳ್ಳಂ ಬೆಳಗ್ಗೆ ಸತೀಶ್ ಜಾರಕಿಹೊಳಿಯರಿಗೆ ಸೇರಿದ ಮನೆಗಳು ಹಾಗೂ ಗೃಹಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೇ ಅವರ ಆಪ್ತ ಸಹಾಯಕರು ಹಾಗೂ ಆಪ್ತರ ಮನೆಯ ಮೇಲೂ ದಾಳಿ ನಡೆಸಲಾಗಿತ್ತು. ಅಲ್ಲದೇ ಬೆಳಗಾವಿಯ ದೂರದರ್ಶನ ನಗರದಲ್ಲಿರುವ ಅವರ ಅಳಿಯ ಅಬಕಾರಿ ಅಪರ ಆಯುಕ್ತ ವೈ ಮಂಜುನಾಥ ಮನೆಯ ಮೇಲೂ ಸಹ ದಾಳಿ ನಡೆಸಿ ಇಡಿ ಅಧಿಕಾರಿಗಳು ವೈ ಮಂಜುನಾಥ ಅವರನ್ನು ವಿಚಾರಣೆ ನಡೆಸಿದ್ದರು. ಸದ್ಯ ಬೆಳಗಾವಿ, ಬೆಂಗಳೂರು, ಹಾಗೂ ಗೋಕಾಕ ನಗರದಲ್ಲಿ ಇಡಿ ದಾಳಿ ಅಂತ್ಯಗೊಂಡಿದೆ. ಸತತ 37 ಗಂಟೆಗಳ ಕಾಲ ಇಡಿ ಸತೀಶ್ ಮನೆಯಲ್ಲಿ ತಲಾಷ್ ನಡೆಸಿದ್ದು ಕೆಲವು ಮಹತ್ವದ ದಾಖಲೆಗಳು ಹಾಗೂ ನಗದನ್ನು ಇಡಿ ವಶಕ್ಕೆ ಪಡೆದಿದೆ ಎನ್ನಲಾಗಿದೆ.ಸತೀಶ್ ಜಾರಕಿಹೊಳಿ, ಪ್ರೀಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ‌ಯವರನ್ನು ಇಡಿ ಅಧಿಕಾರಿಗಳು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಗೋಕಾಕ ನಿವಾಸಕ್ಕೆ ಅಧಿಕಾರಿಗಳು ಎರಡು ಟ್ರಂಕ್ ಗಳನ್ನು ತರಿಸಿಕೊಂಡು ಅದರಲ್ಲಿ ನಿವಾಸದಲ್ಲಿ ಸಿಕ್ಕ ಕೆಲವು ಮಹತ್ವದ ದಾಖಲೆಗಳು ಹಾಗೂ ನಗದನ್ನು ಪಡೆದು ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಸತೀಶ್ ಜಾರಕಿಹೊಳಿ ಬೆಂಗಳೂರಿನ ನಿವಾಸದಲ್ಲಿದ್ದು ಇನ್ನೇನು ಸ್ವತಹ ಅವರೇ ಸುದ್ದಿಗೋಷ್ಠಿ ನಡೆಸುತ್ತಾರೆ ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸತೀಶ್ ಯಾವ್ಯಾವ ವಿಚಾರಗಳ ಕುರಿತು ಮಾಹಿತಿ ನೀಡುತ್ತಾರೆ ಎನ್ನುವುದೇ ಈಗ ಮಹತ್ವದ್ದಾಗಿದ್ದು ಎಲ್ಲರ ಚಿತ್ತ ಅವರ ಸುದ್ದಿಗೋಷ್ಠಿಯತ್ತ ನೆಟ್ಟಿದೆ.

TV24 News Desk
the authorTV24 News Desk

Leave a Reply

error: Content is protected !!