ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಇಡಿ ಪ್ರೇಸ್ ನೋಟ್ ರಿಲೀಸದ ಸಾಹುಕಾರ್ ಮನೆಯಲ್ಲಿ ಸಿಕ್ಕಿದ್ದು 3.3 ಕೋಟಿ ಇಂಡಿಯಾ ನಗದು!15ಲಕ್ಷ ಡಾಲರ್ ಪತ್ತೆ!

ಬೆಳಗಾವಿ:

ಸಚಿವ ಸತೀಶ್ ಜಾರಕಿಹೊಳಿ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ED ಶೋಧಕಾರ್ಯಕ್ಕೆ ಸಂಬಂಧಿಸಿದಂತೆ ಇಡಿ ಮಹತ್ವದ ಪತ್ರಿಕಾಪ್ರಕಟನೆಯನ್ನು ಹೊರಡಿಸಿದೆ.ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದಲ್ಲಿ ಶೋಧ ಕಾರ್ಯ ನಡೆಸಿದ ಇಡಿ( ಜಾರಿ ನಿರ್ದೇಶನಾಲಯ) ಸತೀಶ್ ಜಾರಕಿಹೊಳಿ,ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತ್ತು.ಅಲ್ಲದೇ ಸತೀಶ್ ಅಳಿಯ ವೈ. ಮಂಜುನಾಥ್ ಸೇರಿದಂತೆ ಆಪ್ತರ ಮನೆ, ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿತ್ತು. ಶೋಧ ಕಾರ್ಯದಲ್ಲಿ ವಿದೇಶಿ ಹೂಡಿಕೆ,ಕ್ರಾಸ್‌ ಬಾರ್ಡರ್ ವ್ಯವಹಾರಗಳ ಬಗ್ಗೆ ED ತನಿಖೆ ನಡೆಸಿದ್ದು ಕಾಂಗೋದಲ್ಲಿನ ಗಣಿಗಾರಿಕೆ ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಪಾಲು
ಗಣಿಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಪತ್ತೆಯಾಗಿದೆ ಎಂದು ED ಹೇಳಿದೆ.ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದ್ದು ಅದರಲ್ಲಿ ಲೆಕ್ಕಕ್ಕೆ ತೋರಿಸದ ₹3.3 ಕೋಟಿ ನಗದನ್ನು ಇಡಿ ಜಪ್ತಿ ಮಾಡಿದೆ ಅಲ್ಲದೇ₹15 ಲಕ್ಷ ಮೌಲ್ಯದ ಡಾಲರ್ ಯುರೋ ಸೇರಿದಂತೆ ವಿದೇಶಿ ಕರೆನ್ಸಿ ಜಪ್ತಿ ಮಾಡಿದೆ ಎಂದು ಇಡಿ ಉಲ್ಲೇಖಿಸಿದೆ.ಅಲ್ಲದೇPWD ಅಕ್ರಮ ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹಲಾಗಿದೆ ಎನ್ನುವ ದಾಖಲೆ, ಡಿಜಿಟಲ್ ಸಾಧನಗಳು ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂದು ಇಡಿ ಉಲ್ಲೇಖಿಸಿದೆ.ಸದ್ಯ ಏನೇನಾಯ್ತು ಎನ್ನುವುದನ್ನು ಇಡಿ ಪತ್ರಿಕಾ ಪ್ರಕಟನೆಯ ಮೂಲಕ ಸ್ಪಷ್ಟಪಡಿಸಿದ್ದು ED ತನಿಖೆ ಮುಂದುವರಸಲಿದೆ.

TV24 News Desk
the authorTV24 News Desk

Leave a Reply

error: Content is protected !!