Uncategorized

ಕೊಯ್ನಾ ಜಲಾಶಯದಿಂದ 6 ಸಾವಿರ ಕ್ಯೂಸೇಕ್ ನೀರು ಬಿಡುಗಡೆ ಸಧ್ಯಕ್ಕಿಲ್ಲ ಆತಂಕ!

ಮಹಾರಾಷ್ಟ್ರ:
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಮಹಾರಾಷ್ಟ್ರದಲ್ಲಿ ನದಿಗಳ ಅಬ್ಬರ ಜೋರಾಗಿದೆ. ಸದ್ಯ
ಕೃಷ್ಣಾ ನದಿಗೆ 90 ಸಾವಿರ ಕ್ಯೂಸೆಕ್ ಒಳ ಹರಿವಿದ್ದು
ಕೃಷ್ಣಾ ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಸೇರಿ ಎಲ್ಲಾ ನದಿಗಳ ಅಬ್ಬರ ಜೋರಾಗಿದೆ. ಸದ್ಯ ಕೃಷ್ಣಾ ನದಿಗೆ 90 ಸಾವಿರ ಕ್ಯೂಸೇಕ್ ನೀರು ಒಳಹರಿವಿದ್ದು
ಕೃಷ್ಣಾ ನದಿ ತೀರದಲ್ಲಿರುವ ಜನರಿಗೆ ಭೀತಿ ಹೆಚ್ಚಾಗುತ್ತಿದೆ.
ನದಿ ಇನ್ನೂ ಅಪಾಯ ಮಟ್ಟ ತಲುಪಿಲ್ಲವಾದರೂ ಸಹ ನಿರಂತರ ಮಳೆಯಾದರೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ನಿರಂತರ ಮಳೆ ಹಿನ್ನೆಲೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನಿನ್ನೆ ಸಂಜೆ 5 ಘಂಟೆಗೆ 6000 ಸಾವಿರ ಕ್ಯೋಸಕ್ ಹೆಚ್ಚಿನ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ.
ಇನ್ನು ರಾಧಾನಗರಿ ಜಲಾಶಯದ ಆಟೋಮ್ಯಾಟಿಕ್ ಗೇಟ್ಗಳಿಂದಲೂ ಸಹ ದೂಧಗಂಗಾ ನದಿಗೆ ನೀರು ಬಿಡಲಾಗುತ್ತಿದೆ.ಈಗಾಗಲೇ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 8 ಕೆಳಹಂತದ ಸೇತುವೆ ಜಲಾವೃತವಾಗಿದ್ದು ಸದ್ಯ ವಾಹನ ಸವಾರರು ಪರ್ಯಾಯ ಮಾರ್ಗ ಮೂಲಕ ಸಂಚಾರ ನಡೆಸುತ್ತಿದ್ದಾರೆ. 2.5 ಲಕ್ಷ ಕ್ಯೂಸೇಕ್ ನವರೆಗೂ ನದಿ ಒಳಹರಿವಿನ ಪ್ರಮಾಣ ತಲುಪಿದರೆ ಚಿಕ್ಕೋಡಿ, ಅಂಕಲಿ, ಹಾಗೂ ರಾಯಭಾಗ, ಅಥಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುತ್ತದೆ. ಸದ್ಯ ಅದರ ಆತಂಕ ಇಲ್ಲವಾದರೂ ಮಹಾರಾಷ್ಟ್ರದ ಮಳೆಯ ಮೇಲೆ ಎಲ್ಲವೂ ಸಹ ಅವಲಂಬಿತವಾಗಿದೆ.

TV24 News Desk
the authorTV24 News Desk

Leave a Reply

error: Content is protected !!