


ಬೆಳಗಾವಿ:
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮನೆಯ ಮೇಲಿನ ಇಡಿ ಪರಿಶೀಲನೆಯನ್ನು ಅವರ ಕಾಂಗ್ರೇಸ್ ಪಕ್ಷದವರು ಇದು ರಾಜಕೀಯ ಹಾಗೂ ಅಹಿಂದ ನಾಯಕರನ್ನು ತುಳಿಯುವ ಪ್ರಯತ್ನವನ್ನು ಬಿಜೆಪಿ ಮಾಡ್ತಿದೆ ಎಂದು ಹೇಳುತ್ತ ಓಡಾಡುತ್ತಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ಪ್ರತಿಭಟನೆಗಳನ್ನೂ ಸಹ ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ವಿಶೇಷವಿಲ್ಲ ಆದರೆ ಇದೆ ಮೊದಲ ಬಾರಿಗೆ ಸಾಹುಕಾರ್ ಪರ ಉದ್ಯಮಿ ವಿಜಯ್ ಮಲ್ಯ ಬ್ಯಾಟ್ ಬೀಸಿದ್ದು ಅವರು ತಮ್ಮ X ಖಾತೆಯಲ್ಲಿ ಸಾಹುಕಾರ್ ಪರ ಪೋಸ್ಟ್ ಮಾಡಿದ್ದಾರೆ.ವಿಜಯ್ ಮಲ್ಯ ಪ್ರಖ್ಯಾತ ಮಧ್ಯದ ಉದ್ಯಮಿಯಾಗಿದ್ದು ಸದ್ಯ ಭಾರತದಿಂದ ಓಡಿ ಹೋಗಿ ವಿದೇಶದಲ್ಲಿ ನಲೆಸಿದ್ದಾರೆ.ತಮ್ಮ ಪೋಸ್ಟ್ ಮೂಲಕ ಇಡಿಯ ನಡೆಯನ್ನು ಉದ್ಯಮಿ ವಿಜಯ್ ಮಲ್ಯಾ ಖಂಡಿಸಿದ್ದು ಸತೀಶ್ ಮೇಲಿನ ದಾಳಿಯನ್ನು ಇಡಿ ಸಾಧನೆಯಂತೆ ಬಿಂಬಿಸುತ್ತಿದೆ.
ಯಾವುದೇ ದೋಷಾರೋಪ ಪಟ್ಟಿ ಇಲ್ಲ, ವಿಚಾರಣೆಯೂ ಇಲ್ಲಸಾರ್ವಜನಿಕವಾಗಿ ಕೇವಲ ವ್ಯಕ್ತಿತ್ವ ಹರಣ ನಡೆಯುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯುವುದಿಲ್ಲ ಇದರ ಕುರಿತು ದಯವಿಟ್ಟು ಸ್ವತಃ ಯೋಚಿಸಿ ಎಂದು ಫಸ್ಟ್ ಮಾಡಿದ್ದಾರೆ.ಇಡಿಯ ಪೋಸ್ಟ್ ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ವಿಜಯ್ ಮಲ್ಯ ಪೋಸ್ಟ್ ಈಗ ವೈರಲ್ ಆಗುತ್ತಿದೆ.










