ಕ್ರೈಂಜಿಲ್ಲೆರಾಜ್ಯ

ರಕ್ತಸಿಕ್ತವಾದ ಗ್ರಾಮ ಪಂಚಾಯತ್ ಕಾರ್ಯಾಲಯ!ಪಂಚಾಯ್ತಿಯಲ್ಲೆ ಬಿತ್ತು ತಂದೆ ಮಗಳ ಹೆಣ!

ಬೆಳಗಾವಿ:

ಆಸ್ತಿ ದಾಖಲೆ ಪಡೆಯುವುದಕ್ಕಾಗಿ ಗ್ರಾಮ ಪಂಚಾಯತಿಗೆ ಬಂದಿದ್ದ ತಂದೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಲಾದ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಘಟನೆ ನಡೆದಿದ್ದು ಆಸ್ತಿ ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ವಾಜ್ಯವಿತ್ತು ಎನ್ನಲಾಗಿದೆ. ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ಬಂದಿದ್ದಾಗ ಘಟನೆ ನಡೆದಿದ್ದು ಮಾಜಿ ಯೋಧ ರುದ್ರಪ್ಪ ಕುಂದರಗಿ(67), ಪುತ್ರಿ ಶಶಿಕಲಾ ಕುಂದರಗಿ(26) ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಘಟನೆಯಲ್ಲಿ ರುದ್ರಪ್ಪನ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ರುದ್ರಪ್ಪ ಗ್ರಾಮ ಪಂಚಾಯತಿಗೆ ಬಂದ ವಿಚಾರ ತಿಳಿದು ಅಟ್ಯಾಕ್ ಮಾಡಲಾಗಿದ್ದು ಇಬ್ಬರು ಸಹೋದರರು, ಓರ್ವ ಸಹೋದರನ ಪುತ್ರನಿಂದ ಹತ್ಯೆ ಮಾಡಲಾಗಿದೆ.ಯುವತಿ ಶಶಿಕಲಾ ಜಡೆ ಕಟ್ ಮಾಡಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಗ್ರಾಮ ಪಂಚಾಯತಿ ಒಳಗೆಡೆಯೇ ರುದ್ರಪ್ಪನ ಹತ್ಯೆ ಆಗಿದ್ದು
ಈ ವೇಳೆ ತಂದೆ ಬಿಡಿಸಲು ಹೋದ ಮಗಳಿಗೂ ಮಾರಕಾಸ್ರ್ತಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಲಾಗಿದೆ.ಆಸ್ತಿ ಪಾಲಿಗೆ ಸಂಬಂಧಿಸಿದಂತೆ ರುದ್ರಪ್ಪ ಹಾಗೂ ಅಣ್ತಮ್ಮಂದಿರ ನಡುವೆ ಜಗಳ ಇತ್ತು ಎನ್ನಲಾಗಿದ್ದು ಒಟ್ಟು 38 ಗುಂಟೆ ಆಸ್ತಿ ಪೈಕಿ ಮೂರು ಜನರಿಗೆ ಹಂಚಿಕೆ ಮಾಡಿ ಕೋರ್ಟ್ ಆದೇಶ ಮಾಡಿತ್ತು ಎನ್ನಲಾಗಿದೆ.ಆದ್ರೇ ರುದ್ರಪ್ಪ ತನಗೆ ಬಂದಿದ್ದ ಜಮೀನನ್ನ ಮೊದಲೇ ಮಾರಿಕೊಂಡು ಇನ್ನೂಳಿದ ಜಮೀನಿನಲ್ಲೂ ತನಗೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದ ಎನ್ನಲಾಗಿದೆ.ರುದ್ರಪ್ಪನ ಹೆಸರಿನಲ್ಲಿ ಆಸ್ತಿ ಇರುವ ಕಾರಣಕ್ಕೆ ಜಗಳ ಶುರುವಾಗಿದ್ದು
ಇಬ್ಬರ ಆಸ್ತಿಯಲ್ಲೂ ಪಾಲು ಕೇಳಿದ್ದಕ್ಕೆ ಕುಪಿತಗೊಂಡಿದ್ದ ಇಬ್ಬರು ಸಹೋದರರು ಇಂದು ಜಮೀನು ದಾಖಲು ಮಾಡಲು ಗ್ರಾಮ ಪಂಚಾಯತಿಗೆ ಬಂದಿದ್ದ ವೇಳೆ ರುದ್ರಪ್ಪನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ‌ ಧಾರವಾಡದಿಂದ ಕಾರು ಬಾಡಿಗೆ ಪಡೆದು ಊರಿಗೆ ರುದ್ರಪ್ಪ ಬಂದಿದ್ದ ವಿಚಾರ ತಿಳಿದು ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ‌ ಕುಂದರಗಿ ಮತ್ತು ಪುತ್ರ ಮಡಿವಾಳಪ್ಪ ಕುಂದರಗಿ ಸೇರಿ ರುದ್ರಪ್ಪ ಹಾಗೂ ಆತನ ಮಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.ಕೊಡಲಿ, ಕುಡಗೋಲಿನಿಂದ ಇಬ್ಬರ ಮೇಲೆ ಪಂಚಾಯತಿಯಲ್ಲಿ ಅಟ್ಯಾಕ್ ಆಗಿದ್ದು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!