


ಬೆಳಗಾವಿ:
ಬೆಳಗಾವಿಯಲ್ಲಿ ಭೀಕರ ಹಿಟ್ ಆ್ಯಂಡ್ ರನ್ ಗೆ KSRTC ನೌಕರ ದಾರುಣವಾಗಿ ಸಾವನ್ನಪ್ಪಿದ್ದಾನೆ.ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮೆರಾ ಹಾಗೂ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿದ್ದು
ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದಾಗ ದುರಂತ ನಡೆದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮಿನಿ ಲಾರಿ ಹರಿದು KSRTC ಸಿಬ್ಬಂದಿ ಯಲ್ಲಪ್ಪ ದೊಡಶೇನಟ್ಟಿ(33) ಗೆ ಡಿಕ್ಕಿಯಾಗಿ ಯಲ್ಲಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಬೆನ್ನಟ್ಟಿ ಹಿಡಿದಿದ್ದಾರೆ.ಅಪಘಾತಕ್ಕೂ ಮುನ್ನ ಕುಡಿದು ಅಡ್ಡಾದಿಡ್ಡಿಯಾಗಿ ಲಾರಿ ಚಾಲನೆ ಮಾಡುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಅಪಘಾತಪಡಿಸಿ ಬಡ ನೌಕರನ ಬದುಕು ಅಂತ್ಯಗೊಳಿದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು ಛತ್ತೀಸ್‌ಗಢ ಮೂಲದ ಲಾರಿ ಚಾಲಕ ಮಹೇಂದ್ರ ಚವರೇಯನ್ನು ಬಂಧಿಸಲಾಗಿದೆ.ಕಳೆದ ಎರಡು ವರ್ಷಗಳಿಂದ KSRTC ಯಲ್ಲಪ್ಪ ಸೇವೆಯಲ್ಲಿದ್ದ ಎನ್ನಲಾಗಿದೆ.ಯಲ್ಲಪ್ಪನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಯಲ್ಲಪ್ಪನ ಮೂರು ವರ್ಷ ಹಾಗೂ ಎರಡು ತಿಂಗಳ ಮಗು ಅನಾಥವಾಗಿದ್ದು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮೃತ ಯಲ್ಲಪ್ಪಗೆ ಗೌರವ ಸಲ್ಲಿಸಲಾಗಿದೆ.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









