Uncategorized

ಬರ ಪಟ್ಟಿ ಸೇರಲೂ ಸಹ ರಾಮದುರ್ಗ ಸವದತ್ತಿ ತಾಲೂಕಿಗೆ ಬರ!ಎರಡನ್ನೂ ಕಡೆಗಣಿಸಿದ ಸರ್ಕಾರ!

ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿನ ರೈತರ ಹೋರಾಟಕ್ಕೆ ಮಣಿದು ಕೆಲ ತಾಲೂಕುಗಳನ್ನ ಬರ ಪಟ್ಟಿಗೆ ಸರ್ಕಾರ ಸೇರಿಸಿದೆ.ಬೆಳಗಾವಿ ಜಿಲ್ಲೆಯನ್ನೆ ಬರ ಪಟ್ಟಿಯಿಂದ ಕೈ ಬಿಟ್ಟಿದ್ದ ಸರ್ಕಾರಕ್ಕೆ ರೈತರು ತಮ್ಮದೇ ಶೈಲಿಯ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಿದ್ದರು ಜಿಲ್ಲೆಯ ವಿವಿಧೆಡೆ ರೈತರ ಹೋರಾಟಕ್ಕೆ ಮಣಿದು ಕೆಲ ತಾಲೂಕುಗಳನ್ನ ಬರ ಪಟ್ಟಿಗೆ ಸರ್ಕಾರ ಸೇರಿಸಿದ್ದು
ಅಥಣಿ,ಬೈಲಹೊಂಗಲ, ಬೆಳಗಾವಿ,ಚಿಕ್ಕೋಡಿ, ರಾಯಬಾಗ,ಕಿತ್ತೂರು,ನಿಪ್ಪಾಣಿ,ಮೂಡಲಗಿ,ಯರಗಟ್ಟಿ ತಾಲೂಕುಗಳನ್ನ ಬರ ಪಟ್ಟಿಗೆ ಸರ್ಕಾರ ಸೇರಿಸಿದೆ.ಇನ್ನು ಉಳಿದ ತಾಲೂಕುಗಳಾದ ರಾಮದುರ್ಗ,ಸವದತ್ತಿ ತಾಲೂಕಿನಲ್ಲಿಯೂ ರೈತರ ಸಂಕಷ್ಟ ಇವೆರಡನ್ನ ಬರ ಪಟ್ಟಿಗೆ ಸೇರಿಸುವಂತೆ ರೈತರು ಒತ್ತಾಯಿಸಿದ್ದಾರೆ.ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ. ಬರ ಘೋಷಣೆಯಲ್ಲೂ ಸಹ ಸರ್ಕಾರದ ಯಡವಟ್ಟು ಮಾಡಿಕೊಂಡಿದ್ದು ತೀವ್ರ ಬರ ಎದುರುಸುತ್ತಿರೋ ರಾಮದುರ್ಗ, ಸವದತ್ತಿಗೆ ಸರ್ಕಾರ ಕೈಕೊಟ್ಟಿದೆ.ಎರಡನೇ ಪಟ್ಟಿಯಲ್ಲೂ ರಾಮದುರ್ಗ, ಸವದತ್ತಿ ಮಿಸ್ಸಿಂಗ್ ಆಗಿದ್ದು ಎರಡನೇ ಪಟ್ಟಿಯಲ್ಲಿ ಅಥಣಿ,ಬೈಲಹೊಂಗಲ, ಬೆಳಗಾವಿ,ಚಿಕ್ಕೋಡಿ, ರಾಯಬಾಗ,ಕಿತ್ತೂರು,ನಿಪ್ಪಾಣಿ,ಮೂಡಲಗಿ,ಯರಗಟ್ಟಿ ತಾಲೂಕುಗಳನ್ನ ಬರ ಪಟ್ಟಿಗೆ ಸೇರ್ಪಡೆ ಮಾಡಿದೆ.ಬರ ಪರಿಹಾರದ ನಿರೀಕ್ಷೆಯಲ್ಲಿದ್ದ ಸವದತ್ತಿ, ರಾಮದುರ್ಗ ರೈತರಿಗೆ ಮತ್ತೆ ನಿರಾಸೆ ಆಗಿದ್ದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಡಳಿತ ಬರ ವೀಕ್ಷಣೆ ಮಾಡಿದ್ರೂ ಗಾಮ ದುರ್ಗ ಹಾಗೂ ಸವದತ್ತಿಗೆ ಸದ್ಯ ಬರ ಪಟ್ಟಿ ಸೇರುವ ಅವಕಾಶ ಕೈತಪ್ಪಿದೆ.

TV24 News Desk
the authorTV24 News Desk

Leave a Reply

error: Content is protected !!