Uncategorized

ನಮ್ ಸಾವ್ಕಾರನ ಮಿನಿಸ್ಟರ್ ಮಾಡ್ಲಿಲ್ಲ‌ ಅಂದ್ರ ನಾ ಮೀಶಿ ತಲಿ ಬೋಳ್ಸಕೊಂಡ ಅಡ್ಯಾಡತನ್ರಿ! ಸವದಿ ಅಭಿಮಾನಿ!

ಸಿನಿಮಾ ಹಿರೋ ಹಾಗೂ ರಾಜಕೀಯ ನಾಯಕರ ಒಳಿತಿಗಾಗಿ ಅವರ ಅಭಿಮಾನಿಗಳು ದೇರ ಮೊರೆ ಹೋಗುವುದು, ಪೂಜೆ ಮಾಡಿಸುವುದು, ಹರಕೆ ಕಟ್ಟಿಕೊಳ್ಳುದನ್ನು ನಾವು ನೀವು ಕೇಳಿದ್ದೆವೆ. ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅಭಿಮಾನಿಯೋರ್ವ ಸವದಿಯರಿಗೆ ಮಂತ್ರಿಸ್ಥಾನ ಸಿಗದಿದ್ದರೆ ನಾನು ಸಾಯುವವರೆಗೂ ಮೀಸೆ ಹಾಗೂ ತಲೆ ಬೋಳಿಸಿಕೊಂಡು ಅಥಣಿಯಲ್ಲಿ ಓಡಾಡುವೆ ಎಂದು ಮಾಧ್ಯಮಗಳ ಮುಂದೆ ಶಪಥ ಮಾಡಿದ್ದಾನೆ. ಹೀಗೆ ಶಪಥ ಮಾಡಿರುವ ಅಭಿಮಾನಿಯನ್ನು ಪ್ರದೀಪ್ ನಂದಗಾಂವ್ ಎಂದು ಗುರುತಿಸಲಾಗಿದ್ದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಯಡಿಯೂರಪ್ಪ ನಮ್ಮ ಸವ್ಕಾರಗ(ಸವದಿಗೆ) ಮೋಸ ಮಾಡಿದ್ದಾರೆ. ನಿಮ್ಮನ್ನು ಎಂಎಲ್ಸಿ ಮಾಡಿದ್ದೇವೆ ಈ ಬಾರಿ ನೀನು ಕುಮಟಳ್ಳಿಗೆ ಸ್ಥಾನ‌ ಬಿಟ್ಟು ಕೊಡು ಮುಂದಿನ ಚುನಾವಣೆಯಲ್ಲಿ ನಿನಗೆ ಟಿಕೇಟ್ ಕೊಡಿಸುತ್ತೆನೆ ಎಂದು ಹೇಳುವಾಗ ನಾನೂ ಸಹ ಸವದಿಯವರ ಮನೆಯಲ್ಲಿಯೇ ಇದ್ದೆ ಆದರೆ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲ್ಲ ಹೀಗಾಗಿ ಸವದಿಯವರು ಪಕ್ಷ ಬದಲಾವಣೆ ಮಾಡುವ ಸ್ಥಿತಿ ನಿರ್ಮಾಣ ಆಯ್ತು ಎಂದು ಪ್ರದೀಪ್ ಮಾಧ್ಯಮಗಳ ಮುಂದೆ ಹೇಳಿದ್ದಾನೆ. ಸದ್ಯ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ವೇಳೆ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ಸಿಕ್ಕೇ‌ ಸಿಗುತ್ತದೆ ಒಂದು ವೇಳೆ ಸವದಿಯವರಿಗೆ ಸಚಿವ ಸ್ಥಾನ ಸಿಗದೆ ಇದ್ದರೆ ತಾನು ಸಾಯುವವರೆಗೆ ಅಥಣಿಯಲ್ಲಿ ಮೀಸೆ ಹಾಗೂ ತಲೆ ಬೋಳಿಸಿಕೊಂಡು ಓಡಾಡುವೆ ಎಂದು ಪ್ರದೀಪ್ ನಂದಗಾಂವ್ ಮಾಧ್ಯಮಗಳ ಮುಂದೆ ಶಪಥ ಮಾಡಿದ್ದಾನೆ. ಇದನ್ನು ಕೆಲವರು ಪ್ರಚಾರದ ಗಿಮಿಕ್ ಎಂದು ಕರೆಯುತ್ತಿದ್ದಾರೆ.

ಸವದಿ ಅಭಿಮಾನಿ ಪ್ರದೀಪ್ ನಂದಗಾಂವ್

TV24 News Desk
the authorTV24 News Desk

Leave a Reply

error: Content is protected !!