
ಬೆಳಗಾವಿ:
ಬೆಳಗಾವಿಯ ಅನಮೋಲ ವಿವಿದೋದ್ದೇಶಗಳ ಸಹಕಾರಿ ಸೌಹಾರ್ದ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬಂದಿದೆ. ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರ ಮಹಾಮಂಡಳದಿಂದ ಕೊಡಮಾಡುವ ಈ ಪ್ರಶಸ್ತಿಗೆ ಸಂಘ ಭಾಜನಾವಾಗಿದ್ದು ಸಂಘದ ಆಡಳಿತ ಮಂಡಳಿ ಹರ್ಷವ್ಯಕ್ತಡಿಸಿದೆ. 8/8/2014 ರಲ್ಲಿ ಕೇವಲ 597 ಶೇರುದಾರರಿಂದ 8.73 ಸಾವಿರ ರೂಪಾಯಿಯ ಬಂಡವಾಳ ಕೂಡಿಸಿಕೊಂಡು ಪ್ರಾರಂಭವಾದ ಅನಮೋಲ್ ವಿವಿದೋದ್ದೇಶಗಳ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ.ಸದ್ಯ ಶೇರುದಾರರ ಸಂಖ್ಯೆ 3451ಕ್ಕೆ ತಲುಪಿದ್ದು
87ಲಕ್ಷ 68 ಸಾವಿರ ಶೇರು ಬಂಡವಾಳ ಸಂಗ್ರಹವಾಗಿದೆ.
ಬೆಳಗಾವಿಯ ಕಡೋಲಕರ್ ಗಲ್ಲಿಯಲ್ಲಿ ಸಂಘದ ಮುಖ್ಯ ಕಚೇರಿ ಇದ್ದು ರಾಮತೀರ್ಥ ನಗರ, ಅನಗೋಳ ಸೇರಿದಂತೆ ಬೆಳಗಾವಿ ನಗರದಲ್ಲಿ ಮೂರು ಕಚೇರಿಗಳಿವೆ. ಸದ್ಯ ಸಂಸ್ಥೆ ಹಂತ ಹಂತವಾಗಿ ಬೆಳವಣಿಗೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬ್ರಾಂಚ್ ಮಾಡಿ ಆರ್ಥಿಕ ವಲಯದಲ್ಲಿ ಮಹತ್ತರದ ಬದಲಾವಣೆ ಮಾಡುವ ಸದುದ್ದೇಶವನ್ನು ಆಡಳಿತ ಮಂಡಳಿ ಹೊಂದಿದೆ.
ಸದ್ಯ ಸಂಘದಲ್ಲಿ ಡಿಪಾಸಿಟ್ 14.98 ಕೋಟಿಯಷ್ಟಿದ್ದು
12.22 ಕೋಟಿಯಷ್ಟು ಗ್ರಾಹಕರಿಗೆ ಸಾಲ ನೀಡಲಾಗಿದೆ.
ಇನ್ನು 3.60 ಕೋಟಿ ರೂ ಹೂಡಿಕೆ ಇದ್ದು ಇದೆ.
ದುಡಿಯುವ ಬಂಡವಾಳ
(ವರ್ಕಿಂಗ್ ಕ್ಯಾಪಿಟಲ್)17.95 ಕೋಟಿಯಷ್ಟಿದೆ.ಅಲ್ಲದೆ 88.91 ಕೋಟಿ ವಹಿವಾಟು ತಲುಪಿದ್ದು
ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.88 ಲಕ್ಷ ಸಂಘವು ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.













