ಜಿಲ್ಲೆಬೆಳಗಾವಿ

ಇನ್ಮೇಲೆ ಡಿಸೆಂಬರ್ 10 ಕರಾಳ ದಿನಾಚರಣೆ ಯಾಕೆ ಗೊತ್ತಾ?

ಬೆಳಗಾವಿ:
ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಆಘಾತವಾಗಿದೆ.
ಸಿದ್ದು ಸರ್ಕಾರದ ಮೇಲೆ ಪಂಚಮಸಾಲಿ ಸಮಾಜ ಮುನಿಸಿಕೊಂಡಿದೆ.ಸಿದ್ದರಾಮಯ್ಯ ಸಿಎಂ ಆಗಿರುವ ತನಕ ನಾವು ಮೀಸಲಾತಿ ಕೇಳಲ್ಲ ಎಂದು ಅಥಣಿ ಪಟ್ಟಣದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನಮ್ಮನ್ನ ಹೊಡೆಯುವ ಕೆಲಸ ಸಿಎಂ ಮಾಡಿದ್ದಾರೆ ಅಸಂವಿಧಾನಿಕ ಹೋರಾಟ ಎಂದು ಅಧಿವೇಶನದಲ್ಲಿ ಮಾತನಾಡಿದ್ದಾರೆ
ಅದಕ್ಕಾಗಿ ನಾವು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರುವವರೆಗೂ ಮೀಸಲಾತಿ ಕೇಳಲ್ಲ ಎಂದು ಶ್ರೀಗಳು ಹೇಳಿದ್ದಾರೆ.ಚಳಿಗಾಲದ ಅಧಿವೇಶನದ ‌ಹೋರಾಟದಲ್ಲಿ
ಡಿಸೆಂಬರ್ 10 ರಂದು ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿ ಚಾರ್ಜ್ ಆಗಿದೆ.
ಡಿ.10ರಂದು ನಾವು ಲಿಂಗಾಯತ ಕರಾಳ ದಿನಾಚರಣೆ ಎಂದು ಆಚರಿಸುತ್ತೆವೆ.50 ಸಾವಿರ ಪಂಚಮಸಾಲಿ ಹೋರಾಟಗಾರರು ಬಾವುಟ ಜೊತೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡುತ್ತೆವೆ.
ಸಮಾಜದ ಅನ್ನ ಉಂಡವರು ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ.
ಮುತ್ತಿಗೆ, ಪ್ರತಿಭಟನೆ ಅನ್ನುವುದಕ್ಕಿಂತ ಸಮಾಜ ಜಾಗೃತಗೊಳಿಸುವ ಕೆಲಸ ಮಾಡ್ತಿವಿ‌ ಪಂಚಮಸಾಲಿ ಶಾಸಕರು ಸಮಾಜದ ಋಣ ತೀರಿಸುವ ಕೆಲಸ ಮಾಡಲಿ.
ಋಣ ತೀರಿಸುವ ಕೆಲಸ ಮಾಡಿದ್ರೆ ಇತಿಹಾಸದದಲ್ಲಿ ಉಳಿಯುತ್ತಿರಿ ಇಲ್ಲಾಂದ್ರೆ ಅಳಿಯುತ್ತಿರಿ.
ಮೀಸಲಾತಿಗಾಗಿ 8ನೇ ಹಂತದ ಹೋರಾಟದ ಕುರಿತು ರೂಪುರೇಷಗಳನ್ನ ಮಾಡಿಕೊಳ್ಳಲಾಗಿದೆ.
ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

TV24 News Desk
the authorTV24 News Desk

Leave a Reply