Uncategorized

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಯಾರೂ ಶಾಶ್ವರ ಶತ್ರುವಲ್ಲ! ಸತೀಶ್!

ಬೆಳಗಾವಿ:

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲಾ, ಮಿತ್ರರಲ್ಲಾ ಎಂದು ಹೇಳುವ ಮೂಲಕ ಸಿಎಂ ಡಿಕೆಶಿ ಸಂಪುಟ ವಿಸ್ತರಣೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ರಾಜಕೀಯದಲ್ಲಿ ಸಂಚಲನಕ್ಕೆ ಸತೀಶ್ ಜಾರಕಿಹೊಳಿಯವರ ಹೇಳಿಕೆ ಕಾರಣವಾಗಿದೆ.ಅಲ್ಲದೇ ಈ ಹೇಳಿಕೆ ಜಿಲ್ಲೆಯಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.ಉಸ್ತುವಾರಿ ಸಚಿವ ಜಾರಕಿಹೊಳಿ, ಸಚಿವ ಲಕ್ಷ್ಮಣ ಸವದಿ ಒಂದಾದ್ರಾ ಎಂಬ ಪ್ರಶ್ನೆಯೂ ಮೂಡಿದೆ.ಈ ಕುರಿತು ಹೇಳಿಕೆ ಕೊಟ್ಟಿರುವ ಸಚಿವರು ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದಾರೆ.ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲಾ, ಮಿತ್ರರಲ್ಲಾ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.ಆ ಮೂಲಕ ಇಬ್ಬರೂ ಪ್ರಭಾವಿ ನಾಯಕ ಮಧ್ಯೆ ಸಂಧಾನ ನಡೆದಿರುವುದು ಗೊತ್ತಾಗುತ್ತಿದೆ.ಸಿಎಂ ಸೇರಿ ಪಕ್ಷದ ವರಿಷ್ಠರಿಂದ ಸಂಧಾನ ಆಗಿದೆ ಎನ್ನುವುದು ಕಂಡು ಬರುತ್ತಿದೆ.ಲಕ್ಷ್ಮಣ ಸವದಿಗೆ ಮಂತ್ರಿ ಕೊಡುವ ಮುನ್ನವೇ ದೆಹಲಿಯಲ್ಲಿ ಸಭೆಯಾಗಿದ್ದು ದೆಹಲಿ ಸಭೆಯಲ್ಲಿ ಪಕ್ಷ ಬಲವರ್ಧನೆಗೆ ಒಂದಾಗಿ ಹೋಗಲು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.ಈ ಹಿಂದೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಫೈಟ್ ಸತೀಶ್ ಮತ್ತು ಸವದಿ ಮಧ್ಯೆ ನಡೆದಿತ್ತು.ಆಗ ಜಾರಕಿಹೊಳಿ ಬ್ರದರ್ಸ್ ವರ್ಸಸ್ ಸವದಿ ಕತ್ತಿ ಬಣದ ಮಧ್ಯೆ ದ್ವೇಷದ ರಾಜಕೀಯ ಶುರುವಾಗಿತ್ತು.ಸಂಪುಟ ಸೇರ್ಪಡೆಗೂ ಮುನ್ನ ಇಬ್ಬರ ಮಧ್ಯೆ ರಾಜೀ ಸೂತ್ರವನ್ನಹ ಸಿಎಂ ಡಿಕೆಶಿ ಹೆಣೆದಿದ್ದಾರೆ ಎನ್ನಲಾಗಿದ್ದು ಉಭಯ ನಾಯಕರನ್ನ ಒಂದಾಗಿಸಿ ಸಂಘರ್ಷವನ್ನು ತಪ್ಪಿಸುವುದರಲ್ಲಿ ಡಿಕೆಶಿ ಮುಂದಾಗಿದ್ದಾರೆ ಎನ್ನಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!