ಬೆಳಗಾವಿ:
ಬೆಳಗಾವಿ ಬಸ್ ನಿಲ್ದಾಣದಲ್ಲಿ ದೂರದ ಊರಿನಿಂದ ಬಸ್ ಚಲಾಯಿಸಿಕೊಂಡು ಬರುವ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಕನಿಷ್ಠ ವಸತಿ ಸೌಲಭ್ಯಯೂ ಇಲ್ಲದೇ ಸಾರಿಗೆ ಸಿಬ್ಬಂಧಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸಾರಿಗೆ ಸಿಬ್ಬಂಧಿಗೆ ವಿಶ್ರಾಂತಿ ಕೊಠಡಿ ಇಲ್ಲದೇ ಜೀವ ಕೈಯಲ್ಲಿ ಹಿಡಿದು ಬಸ್ ಓಡಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.ಪ್ರತಿದಿನ ಬೆಳಗಾವಿ ಮಹಾನಗರಕ್ಕೆ ದೂರದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳ ಸಿಬ್ಬಂದಿಗಳು ಬರುತ್ತಾರೆ.ಹಾಗೆ ಬಸ್ ಚಲಾಯಿಸಿಕೊಂಡು ಬಂದವರು ಬಸ್ಸಿನಲ್ಲಿಯೇ ರಾತ್ರಿ ಕಳೆಯುವ ಸುಸ್ಥಿತಿ ಎದರುಗಾಗಿದೆ.ತಮಗೆ ಕನಿಷ್ಠ ವಸತಿ ಸೌಲಭ್ಯವನ್ನೂ ಒದಗಿಸದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇಲಾಖೆ ವಿರುದ್ಧ ಸಾರಿಗೆ ನೌಕರರು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ವಿಶ್ರಾಂತಿ ಕೊಠಡಿ ಇಲ್ಲದೇ ಸಾರಿಗೆ ಸಿಬ್ಬಂಧಿ ನಿತ್ಯವೂ ಪರದಾಟ ನಡೆಸುತ್ತಿದ್ದಾರೆ.ಪ್ರತಿದಿನ ಯಾದಗಿರಿ, ಮೈಸೂರು, ಕಲಬುರಗಿ, ಬಳ್ಳಾರಿ, ಬಸವಕಲ್ಯಾಣ ಸೇರಿ ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿ ಬೆಳಗಾವಿಗೆ ಬರುತ್ತಾರೆ ಆದರೆ ಅವರಿಗೆ ವಿಶ್ರಾಂತಿ ಕೊಠಡಿ ಇಲ್ಲದೇ ರ ತಾವೇ ಚಲಾಯಿಸಿಕೊಂಡು ಬಂದ ಸಾರಿಗೆ ಬಸ್ಸಿನಲ್ಲಿಯೇ ಸಿಬ್ಬಂಧಿ ಮಲಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಮಹಿಳಾ ನಿರ್ವಾಹಕರಿದ್ದರೆ ಅವರ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.ಸೂಕ್ತ ವಸತಿ ಸೌಲಭ್ಯ ಒದಗಿಸದ ತಮ್ಮದೇ ಇಲಾಖೆಯ ವಿರುದ್ಧ ಸಾರಿಗೆ ಸಿಬ್ಬಂಧಿ ಆಕ್ರೋಶ ಹೊರಹಾಕಿದ್ದಾರೆ.ಹಲವಾರು ವರ್ಷಗಳಿಂದ ಬೆಳಗಾವಿಗೆ ಬರೋ ವಸತಿ ಬಸ್ ಚಾಲಕರು, ನಿರ್ವಾಹಕರು ಬಸ್ ಒಳಗೆ ಮಲಗುತ್ತಿದ್ದಾರೆ.ಬಸ್ ನಿಲ್ದಾಣದಲ್ಲಿ ಶುಚಿತ್ವದ ಕೊರತೆಯಿಂದ ಸೊಳ್ಳೆಗಳ ಕಾಟಕ್ಕೆ ನಮಗೆ ನಿದ್ದೆಯೂ ಹತ್ತುತ್ತಿಲ್ಲ.ಹಲವಾರು ವರ್ಷಗಳಿಂದ ನಾವು ಇಲಾಖೆಗೆ ಮನವಿ ಮಾಡಿದರೂ ಸಹ ಯಾರೂ ಇದರ ಕುರಿತು ತಲೆ ಕಡೆಸಿಕೊಂಡಿಲ್ಲ, ಕನಿಷ್ಠ ಸೌಲಭ್ಯ ಕೊಟ್ಟಿಲ್ಲ ವಿಶ್ರಾಂತಿ ಕೊಠಡಿ, ಶೌಚಾಲಯಕ್ಕೂ ಸಹ ಸಾರಿಗೆ ಸಿಬ್ಬಂದಿಗಳು ಪರದಾಡುವ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ ಇನ್ನು ಗಮನಾರ್ಹ ಸಂಗತಿ ಎಂದರೆ ಸಾರಿಗೆ ನಿಗಮದ ಅಧ್ಯಕ್ಷ-ಉಪಾಧ್ಯಕ್ಷರು ಬೆಳಗಾವಿ ಜಿಲ್ಲೆಯವರಾದ್ರೂ ಸಿಬ್ಬಂಧಿಗೆ ಕನಿಷ್ಠ ಸೌಲಭ್ಯವೂ ಮರೀಚಿಕೆಯಾಗಿದೆ.ಬಸ್ ನಲ್ಲಿ ಮಲಗಿಕೊಳ್ಳೊಕೆ ಹೋದರೆ ಸೊಳ್ಳೆಗಳ ಕಾಟ ಬಿಸಿಲು, ಮಳೆಗೆ ಸರಿಯಾದ ನಿದ್ರೆ ಆಗೊದಿಲ್ಲ ರಾತ್ರಿಯಿಡೀ ಬಸ್ ಚಾಲನೆಯಿಂದ ಸುಸ್ತಾಗುತ್ತೆ ಸರಿಯಾದ ವಿಶ್ರಾಂತಿ ಸಿಗದೇ ಅಪಘಾತವಾದರೆ ಹೊಣೆ ಯಾರು? ಎಂದು ಅಧಿಕಾರಿಗಳಿಗೆ ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.ಅಂತಹ ಘಟನೆ ಜರುಗಿದರೆ ನಮ್ಮ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ ಪ್ರಯಾಣಿಕರ ಜೀವಕ್ಕೆ ಅಪಾಯವಾದ್ರೆ ಯಾರು ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಕನಿಷ್ಠ ಸೌಲಭ್ಯಕ್ಕೂ ಚಾಲಕ-ನಿರ್ವಾಹಕರು ಪರದಾಡುತ್ತಿದ್ದೇವೆ ಎಂದು ಬೆಳಗಾವಿ ಸಾರಿಗೆ ಇಲಾಖೆ ಅಧಿಕಾರಿಗಳ ವಸತಿ ಬಸ್ ಚಾಲಕರು, ನಿರ್ವಾಹಕರು ಅಸಮಾಧಾನ ಹೊರಹಾಕಿದ್ದಾರೆ.












