

ಬೆಳಗಾವಿ:
ಬೆಳಗಾವಿ ಮಹಾನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳೆದ ಎರಡುವರೆ ತಿಂಗಳುಗಳಲ್ಲಿ ಬರೊಬ್ಬರಿ 140 ಪ್ರಕರಣಗಳು ದಾಖಲಾಗಿವೆ. ಎಲ್ಲ ದೂರುಗಳೂ ಸಹ ಪೊಲೀಸ್ ಸಹಾಯವಾಣಿ ಸಂಖ್ಯೆ 112 ದಿಂದ ದೂರು ಬಂದ ಹಿನ್ನೆಲೆಯಲ್ಲಿಯೇ ದಾಖಲಾಗಿರುವುದು ವಿಶೇಷ ಸಂಗತಿ. ನಗರದಲ್ಲಿ ರಾತ್ರಿ 10:30 ರ ನಂತರ ಲೌಡ್ ಸ್ಪೀಕರ್ ಬಳಕೆ ಆರೋಪದಡಿ ಬರೊಬ್ಬರಿ 39 ಪ್ರಕರಣಗಳು ದಾಖಲಾಗಿದ್ದರೆ.ಇತ್ತ ಮದ್ಯಪಾನ ಸೇವನೆ ಮಾಡಿ ಗಲಾಟೆ ಮಾಡಿದ್ದಕ್ಕೆ ಬರೊಬ್ಬರಿ 101 ಕೇಸ್(ಪ್ರಕರಣಗಳು) ದಾಖಲಾಗಿವೆ. ಸಾರ್ವಜನಿಕರಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಳಗಾವಿ ನಗರ ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದು,ರಾತ್ರಿ 10:30 ನಂತರ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ರೀತಿಯಲ್ಲಿ ಲೌಡ್ ಸ್ಪೀಕರ್ ಬಳಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಸಂದೇಶವನ್ನು ಬೆಳಗಾವಿ ನಹರ ಪೊಲೀಸರು ನೀಡಿದ್ದಾರೆ. ಅಲ್ಲದೇ ಎಲ್ಲಂದರಲ್ಲಿ ಕುಡಿದು ಗಲಾಟೆ ಮಾಡುವ ಮಹಾಶೂರರಿಗೂ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದೂ ಈಗಾಗಲೇ ಹೇಳಿದಂತೆ ನಗರ ವ್ಯಾಪ್ತಿಯಲ್ಲಿ 101 ಕೇಸ್ ದಾಖಲಾಗಿವೆ. ಅಲ್ಲದೇ ಕುಡಿದು ಎಲ್ಲಂದರಲ್ಲಿ ಗಲಾಟೆ ಮಾಡುವ ಮಜಾಶೂರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದು ಕುಡಿದು ಗಲಾಟೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ಸಾರಿದ್ದಾರೆ. ಈ ಕುರಿತು ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರು ಹಂಚಿಕೊಂಡಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.









