Uncategorized

ಪೊಲೀಸರ ಸೋಗಿನಲ್ಲಿದ್ದ ನಕಲಿ ಪತ್ರಕರ್ತರ ಬಂಧನ! ಇಂಥವರಿಂದಲೇ  ಪತ್ರಿಕೋಧ್ಯಮಕ್ಕೆ ಮಸಿ!

ಬೆಳಗಾವಿ:

ಪತ್ರಕರ್ತರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದವರನ್ನು ಬೆಳಗಾವಿಯ ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.ಪತ್ರಕರ್ತರ ಹೆಸರಿನಲ್ಲಿ ಸುಲಿಗೆಯ ದಂಧೆಗಿಳಿದಿದ್ದ ನಾಲ್ವರು ನಕಲಿ ಪತ್ರಕರ್ತರನ್ನು ಬಂಧಿಸಿ ಹುಕ್ಕೇರಿ ಪೊಲೀಸರು ಜೈಲಿಗಟ್ಟಿದ್ದಾರೆ.ಇಡೀ ಪ್ರಕರಣದ ಕುರಿತು ಕಥೆ ಚಿತ್ರಕಥೆ ಸಂಭಾಷಣೆಯನ್ನು ತಾವೇ ಬರೆದು ಈಗ ಪೊಲೀಸರ ಅತಿಥಿಯಾಗಿದ್ದಾರೆ..ಖದೀಮರು ಮೊದಲು ವ್ಯಕ್ತಿಯ ಕೈಗೆ ಗಾಂಜಾ ಕೊಟ್ಟು ಮೊದಲು ನಂತರ ಆ ವ್ಯಕ್ತಿಯನ್ನು ಬಂಧಿಸುವಂತೆ ಪೊಲೀಸರಂತೆ ವರ್ತಿಸಿದ್ದರು ಎನ್ನಲಾಗಿದೆ‌.ನಾವು ಪೊಲೀಸರು ಎಂದು ಹೇಳಿ ಕೈಲಿದ್ದ ಗಾಂಜಾ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ.ಕೊಟಬಾಗಿಯ ಮಹಿಬೂಬ್ ಜಮಾದಾರ್ ಕೈಗೆ ಗಾಂಜಾ ಕೊಡಿಸಿ ನಂತರ ಮಹಿಬೂಬ್ ಕೈಗೆ ಗಾಂಜಾ ಕೊಡುತ್ತಿದ್ದಂತೆ ಸ್ಥಳದಲ್ಲಿಯೇ ಹಾಜರಾಗಿದ್ದ ನಾಲ್ವರು ಆರೋಪಿಗಳು ಏಕಾಎಕಿ ಬಂದು ಮಹಿಬೂಬ್ ಅವರನ್ನು ಹಿಡಿದು ನಾವು ಪೊಲೀಸರು ಎಂದು ಹೇಳಿ ಮಹಿಬೂಬ್ ರನ್ನು ಬ್ಲಾಕ್ ಮೇಲ್ ಮಾಡಿದ್ದರು..ಬಳಿಕ ಮಹಿಬೂಬ್ ಬಳಿ ಇದ್ದ ಗಾಂಜಾವನ್ನು ವಿಡಿಯೋ ಮಾಡಿಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಬೆದರಿಕೆ ಒಡ್ಡಿದ್ದರು.ಖದೀಮರು ತಾವು ಪೊಲೀಸರು ಎಂದು ಹೇಳಿಕೊಂಡು  ಮಹಿಬೂಬ್ ಎಂಬುವವರಿಂದ 60,000 ಹಣವನ್ನೂ ಪೀಕಿದ್ದರು.
ಸದ್ಯ ಅನ್ಯಾಯಕ್ಕೊಳಗಾದ ಮಹಿಬೂಬ್ ನೀಡಿದ ದೂರಿನನ್ವಯ ಪತ್ರಕರ್ತರ ಸೋಗಿನಲ್ಲಿದ್ದ ನಾಲ್ವರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು
ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ್ ಜುಲಫಿ, ಪೃಥ್ವಿರಾಜ್ ಚೌವ್ಹಾನ್, ಡೇವಿಡ್ ತಂಗೇರಾಳ ಎಂದು ಗುರುತಿಸಲಾಗಿದೆ.
ಕೈಗೆ ಗಾಂಜಾ ಇಟ್ಟು ನಂತರ ಅದನ್ನು ಶೂಟ್ ಮಾಡಿಕೊಂಡಿದ್ದ ಖದೀಮರು ಪೊಲೀಸರ ಹೆಸರನ್ನೆ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ದಂಧೆಗೆ ಇಳಿದಿದ್ದರು.ವಂಚಕರ ಕರಾಮತ್ತು ತಿಳಿದು ಮಹಿಬೂಬ್ ಹುಕ್ಕೇರಿ ಪೊಲೀಸರಿಗೆ ದೂರು ನೀಡಿದ ಬಳಿಕ
ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ಒಂದು ಕಾರು, ಒಂದು ಬೈಕ್,ಎರಡು ಮೊಬೈಲ್ ಹಾಗೂ 34 ಸಾವಿರ ನಗದನ್ನು ಪೊಲೀಸರು ವಶಕ್ಕೆ
ಪಡೆದಿದ್ದು ಈ ಕುರಿತುಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!