

ಬೆಳಗಾವಿ:
ಹೆಚ್ಚಿನ ಬಡ್ಡಿ ಆಮೀಷವೊಡ್ಡಿ ಸಾವಿರಾರು ಕೋಟಿ ವಂಚನೆ ಜಾಲ ಪತ್ತೆಯಾದ ಹಿನ್ನೆಲೆ ಬೆಳಗಾವಿ ನಗರಷ್ಟೇ ಅಲ್ಲ, ತಾಲೂಕು ಪ್ರದೇಶಗಳಿಗೂ ಈ ವಂಚಕರ ಜಾಲ ವ್ಯಾಪಿಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.ಈಗಾಗಲೇ ಬೆಳಗಾವಿಯ ಇಂಥ ಆರು ಕಂಪನಿಗಳ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದ್ದು
ವಂಚನೆಗೈಯುತ್ತಿದ್ದ ಕಚೇರಿಗಳಿಗೆ ಜಿಲ್ಲಾಡಳಿತ ಈಗಾಗಲೇ ಬೀಗ ಜಡಿದಿದೆ.ಶಿವಂ ಅಸೋಶಿಯೇಟ್, ಆದಿತ್ಯರಾಜ್ ಕ್ಯಾಪಿಟಲ್, ಸಿಟಿ ಇಂಡೆಕ್ಸ್,ಗ್ರೋವರ್ಧ್, ಅಪೇಕ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀದೇವಿ ಕೂಗೆ ವೆಂಚರ್ಸ್ ಮೇಲೆ ದಾಳಿ ನಡೆಸಿದ್ದು ಈ ಎಲ್ಲ ಕಂಪನಿಗಳಿಂದ ಐದು ಸಾವಿರ ಕೋಟಿಗಿಂತ ಹೆಚ್ಚು ಹಣ ವಂಚನೆಯಾಗಿರುವುದು ಪತ್ತೆಯಾಗಿದೆ.ಈಗ ಬೆಳಗಾವಿತ ತಾಲೂಕು ಪ್ರದೇಶದಲ್ಲೂ 7 ಕ್ಕೂ ಅಧಿಕ ಕಂಪನಿಗಳು ಹುಟ್ಟಿಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳೇ ಮಾಹಿತಿ ನೀಡಿದ್ದಾರೆ.ಅನಧಿಕೃತ ಕಂಪನಿಗಳ ಮಾಹಿತಿಯನ್ನು ಈಗಾಗಲೇ ಜಿಲ್ಲಾಡಳಿತ ಕಲೆ ಹಾಕಿದ್ದು ಅವುಗಳ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಯಾವುದೇ ಕ್ಷಣದಲ್ಲೂ ಇಂಥ ಕಂನಿಗಳ ಮೇಲೆ ದಾಳಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.











