ಜಿಲ್ಲೆಬೆಳಗಾವಿ ನಗರ

ಬೆಳಗಾವಿ ಸಬ್ ರೆಜಿಸ್ಟಾರ್ ಕಚೇರಿ ಮೇಲೆ ಲೋಕಾದಾಳಿ!

ಬೆಳಗಾವಿ:

ಬೆಳಗಾವಿಯ ಸಬ್ ರಿಜಿಸ್ಟರ್ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ವಲಯದ ವ್ಯಾಪ್ತಿಗೆ ಬರುವ ಸಬ್ ರೆಜಿಸ್ಟರ್ ಕಚೇರಿಯ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ನ್ಯಾಯವಾದಿ ಶುಭವೀರ ಜೈನ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಹಿರಿಯ ಉಪನೊಂದಣಾಧಿಕಾರಿ ಕರಿಬಸವಗೌಡ ಪಿ, ಹಾಗೂ ಅವರ ಸಿಬ್ಬಂಧಿಗಳ ಮೇಲೆ ಭ್ರಷ್ಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ ನಡೆದಿದೆ. ಸಾರ್ವಜನಿಕರಿಂದ ಸಬ್ ರೆಜಿಸ್ಟಾರ್ ಕಚೇರಿಯ ಕುರಿತು ನಿರಂತರ ದೂರುಗಳು ಬಂದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಇನ್ನು ಪರಿಶೀಲನೆ ವೇಳೆ ಕ್ಲರ್ಕ್ ಬಳಿ ಹಣ ಸಿಕ್ಕಿದೆ ಎನ್ನಲಾಗಿದ್ದು ಲೋಕಾಯುಕ್ತ ಸಿಪಿಐ ಅಡಿವೆಪ್ಪ ಬೂದಿಗೊಪ್ಲ ಸೇರಿ 10 ಕ್ಕೂ ಹೆಚ್ಚು ಅಧಿಕ ಅಧಿಕಾರಿ ತಂಡದಿಂದ ದಾಳಿ ನಡೆದಿದ್ದು ಕಚೇರಿಯಲ್ಲಿನ ಪ್ರತಿಯೊಂದು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

TV24 News Desk
the authorTV24 News Desk

Leave a Reply