ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಮಂಗಳವಾದ ಮಂಗಳವಾರ ಇಲ್ಲಿ ಅಗ್ನಿ ದುರಂತ ಅಲ್ಲಿ ಭೀರಕ ಅಪಘಾತ ಒಟ್ಟು 7 ಜನ ಸಾವು!

ಬೆಳಗಾವಿ:

ಬೈಕಿಗೆ KSRTC ಬಸ್ ಗುದ್ದಿ ಸ್ಥಳದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ತಡರಾತ್ರಿ ಘಟನೆ ನಡೆದಿದ್ದು ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
KSRTC ಬಸ್ ಸವದತ್ತಿಯಿಂದ ಧಾರವಾಡದ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.
ಈ ವೇಳೆ ಧಾರವಾಡ ಕಡೆಯಿಂದ ಸವದತ್ತಿ ಕಡೆ ಬರುತ್ತಿದ್ದ ಬೈಕ್ ಗೆ ಬಸ್ ಗುದ್ದಿದ ಪರಿಣಾಮ ಬೈಕ್ ಮುಂಬದಿ ಸವಾರ ಸೇರಿ ಇಬ್ಬರೂ ಹಿಂಬದಿ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತರನ್ನು ವಿನೋದ ಹೊಗೆನ್ನವರ(22)ಆಕಾಶ್ ಜಾಧವ,(20)ರವಿ ಕುರುಬರ( 22) ಎಂದು ಗುರುತಿಸಲಾಗಿದ್ದು ಮೃತರೆಲ್ಲರೂ ಸವದತ್ತಿ ಪಟ್ಟಣದ ನಿವಾಸಿಗಳು ಎಂದು ತಿಳಿದು ಬಂದಿದೆ. ಇನ್ನುಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸವದತ್ತಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

TV24 News Desk
the authorTV24 News Desk

Leave a Reply

error: Content is protected !!