Uncategorized

ಸಚಿವ ಸ್ಥಾನಕ್ಕಾಗಿ ನಾಯಕರ ಲಾಭಿ! ಯಾರತ್ತ ಹೈಕಮಾಂಡ್ ಚಿತ್ತ?

ಬೆಳಗಾವಿ:

ನೂತನ ಸಿಎಂ ಡಿ.ಕೆ.ಶಿಯವರು ಸಂಪುಟ ವಿಸ್ತರಣೆಯ ಸರ್ಕಸ್ ನಡೆಸಿದ್ದಾರೆ. ಈಗಾಗಲೇ ಹಿರಿಯ ಶಾಸಕರುಗಳಿಗೆ ಸಚಿವ ಸ್ಥಾನ ನೀಡಿರುವ ಡಿಕೆಶಿಯವರು ತಮ್ಮ ಎರಡನೇ ಲಿಸ್ಟ್ ನಲ್ಲಿ ಸಚಿವಗಿರಿ ನಮಗೆ ಕೊಟ್ಟೆ ಕೊಡುತ್ತಾರೆ ಎನ್ನುವ ಭರವಸೆಯಲ್ಲಿ ಜಿಲ್ಲೆಯ ಹಲವು ಶಾಸಕರಿದ್ದಾರೆ. ಸಚಿವ ಸ್ಥಾನದ ಸಹಿ ಸುದ್ದಿಗಾಗಿ ಜಿಲ್ಲೆಯ ಹಲವು ಶಾಸಕರು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬೆಳಗಾವಿ ಜಿಲ್ಲೆಯಿಂದ ಸಚಿವ ಸ್ಥಾನದ ರೇಸ್ ನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮೀ ಹೆಬ್ಬಾಳಕರ, ಹಾಗೂ ಅಥಣಿಯ ಹಿರಿಯ ಶಾಸಕ ಲಕ್ಷ್ಮಣ ಸವದಿ ಹೆಸರು ಮುಂಚೂಣಿಯಲ್ಲಿದೆ.‌
ಆದರೆ ಮಂತ್ರಿಗಿರಿ ವಿಚಾರದಲ್ಲಿ ಇಬ್ಬರೂ ನಾಯಕರು ಮಾಧ್ಯಮಗಳ ಮುಂದೆ ತುಟಿ ಬಿಚ್ಚುತ್ತಿಲ್ಲ.ಸೈಲೆಂಟ್ ಆಗಿಯೇ ಹೈಕಮಾಂಡ ಮಟ್ಟದಲ್ಲಿ ನಾಯಕರಿಬ್ಬರೂ ಲಾಭಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಿರಿಯ ನಾಗರೀಕರ ಸಬಲೀಕರ ಇಲಾಖೆಯ ಜವಾಬ್ದಾರಿ ಹೊತ್ತಿದ್ದ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಡಿಕೆಶಿ ಸಂಪುಟದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಮಾಡಲು ಸಜ್ಜಾಗಿದ್ದಾರೆ. ಇತ್ತ ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆಯಾಗಿ ಭಾರಿ ಅಂತರದಿಂದ ಗೆದ್ದಿದ್ದ ಸವದಿಗೆ ಸಚಿವ ಸ್ಥಾನ ನೀಡುತ್ತೆವೆ ಎಂದು ಡಿಕೆಶಿ ಮಾತು ಕೊಟ್ಟಿದ್ದರು ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ. ಹೀಗಾಗಿ ಡಿಕೆಶಿ ಕೊಟ್ಟ ಮಾತಿನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಇದ್ದಾರೆ

ಅತ್ತ ಸಚಿವ ಸತೀಶ್ ಜಾರಕಿಹೊಳಿ‌ ನಡೆ ನಿಗೂಢವಾಗಿದ್ದು ಪ್ರಥಮ ಹಂತದಲ್ಲಿಯೇ ಸಚಿವ ಸ್ಥಾನ ಗಿಟ್ಟಿಸಿಕೊಂಡರುವ ಸಚಿವ ಸತೀಶ್ ಜಿಲ್ಲೆಯಲ್ಲಿ ತಮ್ಮ ರಾಜಕೀಯ ಹಿಡಿತದ ಸಲುವಾಗಿ ಹಿರಿಯ ಶಾಸಕ ಅಶೋಕ್ ಪಟ್ಟಣ್ ಹಾಗೂ ಮಹಾಂತೇಶ್ ಕೌಜಲಗಿ ಪರ ಬ್ಯಾಟ್ ಬೀಸುತ್ತಿದ್ದಾರೆ.ಅದಕ್ಕಾಗಿಯೇ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ.ಇತ್ತ ಗಣೇಶ ಹುಕ್ಕೇರಿ, ಆಸೀಫ್ ಸೇಠ್ ಅವರಿಂದಲೂ ಸಹ ಸಚಿವ ಸ್ಥಾನಕ್ಕಾಗಿ ಲಾಭಿ ಜೋರಾಗಿದೆ.
ಯಾರಿಗೆ ಮಂತ್ರಿಗಿರಿ ಕೊಟ್ಟರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ರಾಜಕೀಯ ದೃವೀಕರಣ ಖಚಿತ ಎನ್ನಲಾಗುತ್ತಿದ್ದು ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಜಿಲ್ಲೆಯಲ್ಲಿಯೇ ಸಚಿವ ಸ್ಥಾನದ ಫೈಟ್ ನಲ್ಲಿ  ತೊಡಗಿರುಗ ನಾಯಕರಲ್ಲಿ ಯಾರು ಸಫಲರಾಗುತ್ತಾರೆ. ಹೈಕಕಾಂಡ್ ಯಾರಿಗೆ ಮನ್ನಣೆ ನೀಡುತ್ತದೆ ಜಿಲ್ಲಾ ನಾಯಕರಲ್ಲಿನ ಈ ಬೇಡಿಕೆಗಳನ್ನು  ಹೈಕಮಾಂಡ್ ಹೆಗೇ ಸರಿದೂಗಿಸುತ್ತೆ ಕಾದು ನೋಡಬೇಕಿದೆ.

TV24 News Desk
the authorTV24 News Desk

Leave a Reply

error: Content is protected !!