ಬೆಳಗಾವಿಬೆಳಗಾವಿ ನಗರ

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಬೆಳಗಾವಿಯಿಂದ ಜೀವ ಬೆದರಿಕೆ 

ಬೆಳಗಾವಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿರುವುದು ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿ ಎಂದು ತಿಳಿದುಬಂದಿದೆ. ಹೀಗಾಗಿ ಮಹಾರಾಷ್ಟ್ರದ ಪೊಲೀಸರು ಜೈಲಿಗೆ ಆಗಮಿಸಿ ಆರೋಪಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜಯೇಶ್ ಕಾಂತ‌ ಎಂಬಾತನೇ ಬೆದರಿಕೆ ಕರೆ ಮಾಡಿದ್ದಾನೆ ಅಂತ ತಿಳಿದು ಬಂದಿದೆ. ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಸಾರ್ವಜನಿಕ ಸಂಪರ್ಕ ಕಚೇರಿಗೆ ಜಯೇಶ್ ಕಾಂತ ನಿನ್ನೆ ಮೂರು ಬಾರಿ ಕರೆ ಮಾಡಿದ್ದನಂತೆ. ಬೆಳಗಾವಿ ಮೂಲದ ಕೈದಿಯೋರ್ವನ ಬಳಿ ಫೋನ್ ಪಡೆದು ಜಯೇಶ್ ಕರೆ ಮಾಡಿದ್ದಾನೆ ಅಂತ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ನಾಗ್ಪುರ ಪೊಲೀಸರಿಗೆ ಕೊಲ್ಹಾಪುರ, ಸಾಂಗ್ಲಿ, ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದಾರೆ. ಶನಿವಾರ ಸಂಜೆ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧ ಕಾರ್ಯ ನಡೆಸಿರುವ ಪೊಲೀಸರು ತನ್ನ ಪತ್ನಿಗೆ ಕರೆ ಮಾಡ್ತೀನಿ ಎಂದು‌ ಮತ್ತೋರ್ವ ಕೈದಿ ಬಳಿ ಮೊಬೈಲ್ ಪಡೆದು ಜಯೇಶ್ ಕರೆ ಮಾಡಿದ್ದಾನೆ. ಬೆದರಿಕೆ ಕರೆ ಬಗ್ಗೆ ನಾಗ್ಪುರ ಪೊಲೀಸರ ಗಮನಕ್ಕೆ ತಂದಿದ್ದರು ಕಚೇರಿ ಸಿಬ್ಬಂದಿ. ನಾಗ್ಪುರ ಪೊಲೀಸರ ತನಿಖೆ ವೇಳೆ ಹಿಂಡಲಗಾ ಜೈಲಿನಿಂದ ಕರೆ ಬಂದಿರೋದು ಪತ್ತೆಯಾಗಿದೆ. ನಿನ್ನೆ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ನಾಗ್ಪುರ ಪೊಲೀಸರು ಭೇಟಿ ನೀಡಿ ಮಾಹಿತಿ‌ ಕಲೆ ಹಾಕಿದ್ದಾರೆ.ಮಂಗಳೂರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿ ಜಯೇಶ್‌ ಜೈಲು ಸೇರಿದ್ದನು.
TV24 News Desk
the authorTV24 News Desk

Leave a Reply

error: Content is protected !!