ದೇಶ

ದಿವ್ಯ ಪಹುಜಾ ಮೃತದೇಹ 10 ದಿನದ ಬಳಿ ನಾಲೆಯಲ್ಲಿ ಪತ್ತೆ..! 

ಜ.2ರಂದು ಗುರುಗ್ರಾಂನ ಸಿಟಿ ಪಾಯಿಂಟ್ ಹೊಟೆಲ್‌ನಲ್ಲಿ ಹತ್ಯೆಯಾದ 27ರ ಹರೆಯದ ಮಾಡೆಲ್ ದಿವ್ಯ ಪಹುಜಾ ಮೃತದೇಹ ಪತ್ತೆಯಾಗಿದೆ. ಹರ್ಯಾಣದ ತೋಹಾನಾ ನಾಲೆಯಲ್ಲಿ ದಿವ್ಯ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜನವರಿ 2 ರಂದು ಸಿಟಿ ಪಾಯಿಂಟ್ ಮಾಲೀಕ ಅಭಿಜಿತ್ ಸಿಂಗ್ ಸೇರಿದಂತೆ ಐವರ ತಂಡ ದಿವ್ಯ ಪಹುಜಾಳನ್ನು ಹತ್ಯೆ ಮಾಡಿದ್ದರು. ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿಗಳ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.
 
ಮುಂಬೈನಲ್ಲಿ ನಡೆದ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆ ಪ್ರಮುಖ ಆರೋಪಿಯಾಗಿರುವ ದಿವ್ಯ ಪಹುಜಾ, ಮುಂಬೈ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಳು. ಆದರೆ ತನ್ನ ಹಳೇ ಚಾಳಿ ಮುಂದುವರಿಸಿದ್ದಳು. ಉದ್ಯಮಿಗಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ರಹಸ್ಯವಾಗಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಳು.
ಹೀಗೆ ಸಿಟಿ ಪಾಯಿಂಟ್ ಹೊಟೆಲ್ ಮಾಲೀಕ ಅಭಿಜಿತ್ ಸಿಂಗ್ ಕೂಡ ಈಕೆಯ ಖೆಡ್ಡಾಗೆ ಬಿದ್ದು ಒದ್ದಾಡಿದ್ದ. ಜನವರಿ 2ರಂದು ಹೊಟೆಲ್‌ಗೆ ಕರೆಯಿಸಿದ ಅಭಿಜಿತ್ ಅಶ್ಲೀಲ ಫೋಟೋ ಹಾಗೂ ವಿಡಿಯೋಗಲನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದಾನೆ. ಆದರೆ ದಿವ್ಯ ಪಹುಜಾ ಒಪ್ಪಿಲ್ಲ. ಪಾಸ್‌ವರ್ಡ್ ಕೂಡ ನೀಡದೆ ಸತಾಯಿಸಿದ್ದಳು. ಇದರಿಂದ ಆಕ್ರೋಶಗೊಂಡ ಅಭಿಜಿತ್ ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಕುರಿತು ಪೊಲೀಸರ ಮುಂದೆ ಅಭಿಜಿತ್ ಹೇಳಿದ್ದಾನೆ.
 
ಮೃತದೇಹವನ್ನು ಬಿಎಂಡಬ್ಲೂ ಕಾರಿನಲ್ಲಿ ಸಾಗಿಸಲಾಗಿತ್ತು. ಆದರೆ ಮೃತದೇವನ್ನು ಯಾರಿಗೂ ತಿಳಿಯದಂತೆ ಎಸೆಯೆಲು ಇಬ್ಬರಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಇಬ್ಬರು ಮೃತದೇಹದ ಜೊತೆ ಪರಾರಿಯಾಗಿದ್ದರು. 
ಹೀಗಾಗಿ ಕಳೆದ 10 ದಿನಗಳಿಂದ ಹುಡಾಟನಡೆಸಿದ ಪೊಲೀಸರು ಇದೀಗ ಹರ್ಯಾಣ ನಾಲೆಯಲ್ಲಿ ಮೃತೇದಹ ಪತ್ತೆಯಾಗಿದೆ. ಆದರೆ ಮೃತದೇಹ ಎಸೆಯಲು ಹೋದ ಇನ್ನಿಬ್ಬರು ಆರೋಪಿಗಳು ಪತ್ತೆಯಾಗಿಲ್ಲ
ಮಾಡೆಲ್ ದಿವ್ಯ ಪಹುಜಾ ಹಲವು ಉದ್ಯಮಿಗಳನ್ನು ಇದೇ ರೀತಿ ಪ್ರೀತಿಯಲ್ಲಿ ಬಲೆಯಲ್ಲಿ ಬೀಳಿಸಿ ಬ್ಲಾಕ್‌ಮೇಲ್ ಮಾಡಿದ್ದಾಳೆ. 2016ರಲ್ಲಿ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಪ್ರೇಯಸಿಯಾಗಿದ್ದ ದಿವ್ಯ, ಆತನ ಹತ್ಯೆಗೂ ಕಾರಣವಾಗಿದ್ದಳು. 
7 ವರ್ಷಗಳಿಂದ ಜೈಲು ಶಿಕ್ಷೆಯಲ್ಲಿದ್ದ ದಿವ್ಯ ಪಹುಜಾ 2023ರ ಜೂನ್ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ತನ್ನ ಬ್ಲಾಕ್‌ಮೇಲ್ ದಂಧೆ ಆರಂಭಿಸಿದ್ದಳು.
TV24 News Desk
the authorTV24 News Desk

Leave a Reply

error: Content is protected !!