

ಬೆಳಗಾವಿ:
ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದೆಹಲಿಯಲ್ಲಿ ಲಾಠಿ ಚಾರ್ಜ್ ವಿಚಾರದ ಕುರಿತು ಪ್ರತಿಕ್ರಿಯಿಸಿದರು ದೇಶದಲ್ಲಿ ಈ ರೀತಿ ಸುಮಾರು ಘಟನೆಗಳು ಆಗಿವೆ ನಿನ್ನೆ ದೆಹಲಿ ತುಂಬ ಪ್ರತಿಭಟನೆ ಆಗಿದೆ.
ಸದ್ಯ ವಾತಾವರಣ ಬಿಗಿಯಾಗಿದೆ.ಕೇಂದ್ರ ಸರ್ಕಾರ ಮಾತನಾಡಲು ಯಾರನ್ನಾದ್ರೂ ಕಳುಹಿಸಬೇಕು.ಯಾರಾದ್ರೂ ಹೋಗಿ ಮಾತನಾಡಬೇಕಿತ್ತು ಈಗಲೂ ಕಾಲ ಮಿಂಚಿಲ್ಲ ಹೋಗಿ ಮಾತಾಡಿ ಸರಿ ಪಡಿಸಬೇಕು ಎಂದು ಮನವಿ ಮಾಡಿದರು. ಇನ್ನು ಮಾಧ್ಯಮಗಳು ಕೇಳಿದ ಕಾಕ್ರೋಜ್ ಪಾರ್ಟಿಗೆ ಕಾಂಗ್ರೆಸ್ ಸಪೋರ್ಟ್ ಇದೆಯಾ ಎಂಬ ಪ್ರಶ್ನೆಗೆ ನಮ್ಮದು ಸಪೋರ್ಟ್ ಇಲ್ಲಾ ಇಂಡಿಪೆಂಡೆಂಟ್ ಆಗಿ ಮಾಡ್ತಿದಾರೆ ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡ್ತಿದಾರೆ ಎಂದು ಸಚಿವರು ಹೇಳಿದರು.
ಇನ್ನು ರಾಜ್ಯದ ಸಂಪುಟ ವಿಸ್ತರಣೆ ವಿಚಾರದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು
ವಿಸ್ತರಣೆ ಮಾಡ್ತಾರೆ ಯಾವಾಗ ಬೇಕೋ ಆವಾಗ ಮಾಡುತ್ತಾರೆ ಅದು ಅವರ ಸಮಸ್ಯೆ ಎಂದು ಸಚಿವರು ಹೇಳಿದರು.
ಇನ್ನು ಬರ ನಿರ್ವಹಣೆಗೆ ಸಚಿವರಿಲ್ಲ ಎಂಬ ಬಿಜೆಪಿ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈಗ ಎಲ್ಲವೂ ಸರಿಯಾಗಿ ನಡೆದಿದೆಯಲ್ಲ ಎಂದು ಪ್ರಶ್ನಿಸಿದರು.ನಾವು ಮೂರು ಜಿಲ್ಲೆ ನಿಭಾಯಿಸುತ್ತಿದ್ದೇವೆ ಎಂದರು..ಬೆಳಗಾವಿಯ ಶಾಸಕರು ದೆಹಲಿಗೆ ತೆರಳಿದ್ದ ವಿಚಾರಕ್ಕೆ ನಾವು ಸೀನಿಯರ್ ಇದಿವಿ ಅಂತಾ ಬಂದಿದ್ರೂ.
ಮೂರು ಜನರಿಗೆ ಯಾರಿಗಾದ್ರೂ ಕೊಡಿ ಅಂತಾ ಹೇಳಿದಾರೆ.
ಯಾರಿಗೆ ಕೊಡ್ತಾರೆ ನೋಡೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದರು.ಯಾರು ಕೆಲಸ ಮಾಡ್ತಾರೆ ಅವರಿಗೆ ಕೊಡಿ ಅಂದಿದ್ದೇವೆ.
ಅಶೋಕ್ ಪಟ್ಟಣ್ ಅವರು ಸಿನೀಯರ್ ಇದಾರೆ ಸಚಿವ ಸ್ಥಾನ ಕೊಡಿ ಅಂತಾ ಕೇಳ್ತಿದಾರೆ ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಾಡ್ತಾರೆ ಕಾದುನೋಡಬೇಕು ಎಂದರು ಇನ್ನು ಉತ್ತರ ಕರ್ನಾಟಕಕ್ಕೆ ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ಕೊಡುವ ವಿಚಾರಕ್ಕೆ ಮುಸ್ಲಿಂ ಎಲ್ಲಿಯಾದರೂ ಕೊಟ್ರೂ ಆಗುತ್ತೆ
ಬೆಳಗಾವಿ ಜಿಲ್ಲೆಗೆ ಇನ್ನೂ ಒಂದು ಸ್ಥಾನ ಅಂತು ಸಿಗಲೇಬೇಕು ಎಂದರು.ಇನ್ನು ಸಚಿವರ ಪಕ್ಕದಲ್ಲಿಯೇ ಕುಳಿತಿದ್ದ ಶಾಸಕ ಅಸೀಸ್ ಸೇಠ್ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೊನ್ನೆಯೇ ಪಕ್ಷದಲ್ಲಿ ರಿಸ್ಟಿಂಕ್ಷನ್ ಮಾಡಿದ್ದಾರೆ ಮೊದಲ ಬಾರಿಗೆ ಸಚಿವರಾದವರಿಗೆ ಸಚಿವ ಸ್ಥಾನ ಇಲ್ಲ ಎಂದು ಹೇಳಿದ್ದಾರೆ ಎಂದರು.
ಇನ್ನು ಶಾಸಕ ಲಕ್ಷ್ಮಣ ಸವದಿ ದೆಹಲಿಗೆ ಹೋಗಿದ್ದ ವಿಚಾರಕ್ಕೆ ಎಲ್ಲರಿಗೂ ಆಸೆ ಇದೆ ಡಿಮ್ಯಾಂಡ್ ಮಾಡ್ತಾರೆ ಎಂದು ಸಚಿವರು ಹೇಳಿದರು.ಇನ್ನು ರಾಜ್ಯದಲ್ಲಿ ತಲೆದೋರಿರುವ ಬರದ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಾಗಲೇ ಸಿಎಂ ಸಂಪುಟ ಸಭೆ ಕರೆದು ಚರ್ಚೆ ಮಾಡಿದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಲು ಹೇಳಿದಾರೆ ವರದಿ ನೀಡುವಂತೆ ಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ ಅವರು ವರದಿ ನೀಡಿದ ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತೆ ಎಂದರು.











