ಬೆಳಗಾವಿ:
ಬೆಳಗಾವಿ ಮಹಾನಗರದ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ಇಂದು ಬೆಳಗಾವಿ ನಗರ ಪೊಲೀಸ್ ನೇತ್ರತ್ವದಲ್ಲಿ “ಬೇಡ ಬ್ರೋ” ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಮಾದಕ ವ್ಯಸನದಿಂದ ಯುವಕರನ್ನು ಕಾಪಾಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆಯವರು ದೇಶಾದ್ಯಂತ 18 ಕೋಟಿ ಹಾಗೂ ನಮ್ಮದೇ ಕರ್ನಾಟಕ ರಾಜ್ಯದಲ್ಲಿ 17 ಲಕ್ಷಕ್ಕೂ ಅಧಿಕ ಮಾದಕ ವ್ಯಸನಿಗಳು ಇರುವುದು ವಿಪರ್ಯಾದ ಎಂದರು. ಮಾದಕ ವ್ಯಸನವನ್ನು ನಾವು ಬುಡದಿಂದ ಕಿತ್ತು ಎಸೆಯಬೇಕಿದೆ. ಹೀಗಾಗಿ ಪೊಲೀಸ್ ಇಲಾಖೆಯ ಜೊತೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು. ನನ್ನ ಬೆಳಗಾವಿಗೆ ನನ್ನ ಸಲಹೆ ಆಪ್ ಮೂಲಕ ಮಾದಕ ವಸ್ತುಗಳ ಮಾರಾಟ ಕಂಡು ಬಂದರೆ ಆ ಯ್ಯಾಪ್ ಮೂಲಕ ನಮಗೆ ದೂರು ಸಲ್ಲಿಸಬಹುದು. ದೂರು ಸಲ್ಲಿಸುವವರ ಹೆಸರು ಗೌಪ್ಯವಾಗಿರುತ್ತದೆ. ಡ್ರಗ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು. ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರು ದೇಶದ ಮೇಲೆ ಮಾದಕತೆ ಎನ್ನುವುದು ಒಂದು ರೀತಿಯ ಭಯೋತ್ಪಾದನೆ ನಮ್ಮ ಶತ್ರು ರಾಷ್ಟ್ರಗಳು ದೇಶವನ್ನು ಹಾಳು ಮಾಡುವ ಸಲುವಾಗಿ ದೇಶದ ಮೆದುಳಿನಂತಿರುವ ಯುವಕರನ್ನೆ ಟಾರ್ಗೇಟ್ ಮಾಡುತ್ತಿವೆ.ಹೀಗಾಗಿ ಯುವಕರು ಜಾಗೃತಿ ವಹಿಸಬೇಕು. ನಾವು ಖಾಕಿ ಹಾಕಿರುವ ಪೊಲೀಸ್ ಆದರೆ ಸಾರ್ವಜನಿಕರು ಖಾಕಿ ಹಾಕದ ಪೊಲೀಸರಾಗಬೇಕು. ಜಿಲ್ಲೆಯಲ್ಲಿ ಎಲ್ಲಿಯೇ ಮಾದಕ ಮಾರಾಟದ ವಿಚಾರ ಗೊತ್ತಾದರೆ ಕೆಎಸ್ಪಿ ಅಪ್ಲಿಕೇಷನ್ ನಲ್ಲಿ ಮಾಹಿತಿ ನೀಡಿದರೆ ಅಂತವರ ವಿರುದ್ಧ ಅಂದೇ ನಾವು ಕ್ರಮಕ್ಕೆ ಮುಂದಾಗುತ್ತೆವೆ ಎಂದರು. ಇನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ ತಾವು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಡ್ರಗ್ ವ್ಯಸನಿಗಳು ಹೇಗಿರುತ್ತಿದ್ದರು. ಎಂದು ಹೇಳಿದರು. ಅಲ್ಲದೇ ಸಭೆಯಲ್ಲಿ ಯುವಕರಿಗಾಗಿ ಶಾಹಿರಿ ಹೇಳಿ ಜಿಲ್ಲಾಧಿಕಾರಿಗಳು ನೆರೆದಿದ್ದವರ ಗಮನ ಸೆಳೆದರು.ಕಾರ್ಯಕ್ರಮದ ಕಡೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಡ್ರಗ್ ಜಾಲ ಹೊರದೇಶಗಳಿಂದ ಹಿಡಿದು ಹಳ್ಳಿ ಹಳ್ಳಿಗೂ ಸಹ ಹಬ್ಬಿದ್ದು ಅದನ್ನು ತಡೆಗಟ್ಟುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಎಲ್ಲರಲ್ಲುಇ ಡ್ರಗ್ ಕುರಿತಾದ ಅರಿವು ಮೂಡಿಸಬೇಕು. ಡ್ರಗ್ ವಿಚಾರವಾಗಿ ಪೊಲೀಸರ ಜೊತೆಗೆ ಸಹಕಾರ ನೀಡಬೇಕು ಎಂದು ಹೇಳಿದರು. ಇನ್ನು ಕಾರ್ಯಕ್ರಮದ ಕೊನೆಯಲ್ಲಿ ನಗರ ಪೊಲೀಸ್ ಆಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಸೇವನೆ ಮಾಡುವುದಿಲ್ಲ ಎಂಬ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಇನ್ನು ಕಾರ್ಯಕ್ರಮಲ್ಲಿ ಉತ್ತರ ಶಾಸಕ ಅಸೀಪ್ ರಾಜು ಸೇಠ್, ಕಾಲೇಜು ವಿಸಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾಲೇಜು ಉಪನ್ಯಾಸಕರು ಸ್ವಾಗತಿಸಿ ವಂದಿಸಿದರು.












