ಕ್ರೈಂಬೆಳಗಾವಿ

ರಾತೋರಾತ್ರಿ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ ಗ್ಯಾಂಗ್!

ಬೆಳಗಾವಿ:

ಪೋಲಿ ಪುಂಡ ಗ್ಯಾಂಗ್ ಒಂದು ರಾತೋರಾತ್ರಿ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ ಘಟನೆ‌ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ‌ ತಾಂವಶಿ ಗ್ರಾಮದಲ್ಲಿ ವರದಿಯಾಗಿದೆ. ಯುವಕರ ಗ್ಯಾಂಗ್ ಒಂದು ರಾತ್ರಿ ಹೊತ್ತು ಗ್ರಾಮಕ್ಕೆ ನೂಗ್ಗಿ ಹಲ್ಲೆ ಮಾಡಿದೆ ಎಂದು ಗ್ರಾಮಸ್ಥರು ಹೇಳಿಕೆ‌ ನೀಡಿದ್ದಾರೆ. ಶುಕ್ರವಾರ ಸಾಯಂಕಾಲ ಸುಮಾರು 15 ಜನ ಕಿಡಿಗೇಡಿಗಳ ಗ್ಯಾಂಗ ಗ್ರಾಮಕ್ಕೆ ಬಂದು ಗಲಾಟೆ ಮಾಡಿದೆ ಕೈಯಲ್ಲಿ ಕೋಲು, ಕಲ್ಲು, ಎಲೆಕ್ಟ್ರಿಕ್ ಲೈಟರ್,ಹಿಡಿದು ಪುಂಡಾಟ ಮೆರೆದಿದ್ದಾರೆ. ಗಲಾಟೆಯಲ್ಲಿ ತಾಂವಶಿ ಗ್ರಾಮದ ಅಪ್ಪಾಸಾಬ ಸಿದ್ರಾಮ್ ಬಿಳ್ಳೂರ ಇತನ ತಲೆಗೆ ಗಂಭೀರ ಗಾಯವಾಗಿದೆ.ಇನ್ನು ನಾಗರಾಜ್ ಬೆಳ್ಳಂಕಿ, ಅಶೋಕ್ ಕೆಂಚಗೌಡರ್, ಮಲ್ಲಿಕಾರ್ಜುನ್ ಲಖಗೌಡರ ಇತರಿಗೆ ಪೆಟ್ಟಾಗಿದೆ. ಗಾಯಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾಣಿಸಿದ್ದಾರೆ. ಕಿಡಿಗೇಡಿಗಳು ತಾಂವಶಿ ಗ್ರಾಮದಲ್ಲಿ ಅಶಾಂತಿ ಉಂಟುಮಾಡಿದ್ದು, ಗ್ರಾಮದಲ್ಲಿ ಅಡ್ಡ ದಿಡ್ಡಿಯಾಗಿ ಬೈಕ್ ಸುತ್ತಾಟ ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದಲ್ಲದೆ ಅಗಂಡಿ ವ್ಯಾಪಾರಸ್ಥರ ಮೇಲೆ ಗುಂಡಾವರ್ತನೆ ತೋರುತ್ತಿರುವ ಕುರಿತು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ತುರ್ತು ಸೇವೆ 112 ಸಿಬ್ಬಂದಿ ಬೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

TV24 News Desk
the authorTV24 News Desk

Leave a Reply