

ಬೆಳಗಾವಿ:
ಕುಡಚಿ ಸೇತುವೆ ಮುಳುಗಡೆಯಾದ ಹಿನ್ನೆಲೆ ಕರ್ನಾಟಕ- ಮಹಾರಾಷ್ಟ್ರ ಸಂಚಾರ ಸ್ಥಗಿತಗೊಂಡಿದೆ.
ಕೃಷ್ಣಾ ನದಿಗೆ ಅಡ್ಡಾಲಾಗಿ ನಿರ್ಮಿಸಿದ್ದ ಕುಡಚಿ ಸೇತುವೆ ಮುಳುಗಡೆ ಮುಳುಗಡೆಯಾಗಿದ್ದು
ಉಗಾರಕುರ್ದ್ ಮತ್ತು ಕುಡಚಿಗೆ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ಇದಾಗಿದೆ.ಉಗಾರ್ ಖುರ್ದ್ ಮೂಲಕ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ಕೃಷ್ಣಾ ನದಿ ನೀರಿನಿಂದ ಮುಳುಗಡೆಯಾಗಿದ್ದು ಕೃಷ್ಣಾ ನದಿಗೆ ಭಾರಿ ಪ್ರಮಾಣದ ಒಳಹರಿವು ಹಿನ್ನೆಲೆ ಸೇತುವೆ ಮೇಲೆ ನೀರು ಆವರಿಸಿದೆ.ಸೇತುವೆ ಮುಳುಗಡೆ ಹಿನ್ನೆಲೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಸೇತುವೆಯ ಎರಡೂ ಕಡೆ
ಬ್ಯಾರಿಕೇಡ್ ಹಾಕಿ ಸೇತುವೆಯನ್ನು ಕುಡಚಿ ಪೊಲೀಸರು ಬಂದ್ ಮಾಡಿದ್ದಾರೆ.ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯ ಹಿನ್ನೆಲೆ ಕರ್ನಾಟದತ್ತ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.ಭಾರಿ ಕೃಷ್ಣೆಗೆ ಭಾರಿ ಪ್ರಮಾಣದ ಒಳಹರಿವು ಬರುತ್ತಿದ್ದು ಸದ್ಯ 1 ಲಕ್ಷ 40 ದಷ್ಟು ಕೃಷ್ಣಾ ಒಳಹರಿವಿನ ಪ್ರಮಾಣ ದಾಖಲಾಗಿದೆ.









