Uncategorized

ಬೆಳಗಾವಿಯಲ್ಲಿಂದು ಸಿಎಂ ಡಿಕೆಶಿ ಡಿನ್ನರ್ ಪಾರ್ಟಿ! ಚನ್ನರಾಜ್ ಹೆಗಲಿಗೆ ಪಾರ್ಟಿ ಉಸ್ತುವಾರಿ!

ಬೆಳಗಾವಿ:

ಕಿತ್ತೂರು ಕರ್ನಾಟಕ ಭಾಗದ ಶಾಸಕರ ವಿಶ್ವಾಸ ಪಡೆಯಲು ಸಿಎಂ ಡಿಕೆಶಿ ಕಸರತ್ತು ನಡೆಸಿದ್ದಾರೆ.ಕಿತ್ತೂರು ಕರ್ನಾಟಕ ಭಾಗದ ಕಾಂಗ್ರೆಸ್ ನಾಯಕರಿಗೆ ಡಿಕೆ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದಾರೆ.ಸಂಪುಟ ವಿಸ್ತರಣೆ ಚರ್ಚೆ ಮಧ್ಯೆಯೇ ನಾಯಕರ ವಿಶ್ವಾಸ ಗಳಿಸಲು ಡಿಕೆಶಿ ಪ್ಲ್ಯಾನ್ ಮಾಡಿದ್ದು ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗದವರು ಮುನಿಸಿಕೊಳ್ಳಬಾರದೆಂದು ಡಿಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.ನಾಯಕರ ಜೊತೆಗೆ ಸಮಯ ಕಳೆದು ವಿಶ್ವಾಸ ಗಳಿಸಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದು ಡಿನ್ನರ್ ಮೀಟಿಂಗ್‌ನಲ್ಲಿ ಡಿಸಿಎಂ ಪರಮೇಶ್ವರ, ಯುಟಿ ಖಾದರ್
ಸತೀಶ್ ಜಾರಕಿಹೊಳಿ‌, ಎಂಬಿ ಪಾಟೀಲ, ಈಶ್ವರ ಖಂಡ್ರೆಯೂ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಕಿತ್ತೂರು ಕರ್ನಾಟಕ ಭಾಗದ ಏಳೂ ಜಿಲ್ಲೆಗಳ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು
ಸಂಸದರು, ಮಾಜಿ ಸಂಸದರು, ಪರಿಷತ್ ಸದಸ್ಯರು, ಮಾಜಿ ಪರಿಷತ್ ಸದಸ್ಯರಿಗೆ ಡಿನ್ನರ್ ವ್ಯವಸ್ಥೆ ಮಾಡಲಾಗಿದ್ದು
ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಕೈ ನಾಯಕರಿಗೆ ಡಿಕೆ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ.ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿಗೆ ಪಾರ್ಟಿ ಆಯೋಜನೆ ಹೊಣೆ ನೀಡಲಾಗಿದ್ದು ಸಂಜೆ 7.30 ಕ್ಕೆ ಸಿಎಂ ಡಿನ್ನರ್ ಪಾರ್ಟಿ ಆರಂಭವಾಗಲಿದೆ.

TV24 News Desk
the authorTV24 News Desk

Leave a Reply