


ಬೆಳಗಾವಿ:
ಧಾರಾಕಾರ ಮಳೆಯಿಂದ ಬೆಳಗಾವಿಯ ಖಾನಾಪುರ ತಾಲೂಕಿನ ಹಲವು ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಯಾವುದೇ ಅವಘಡ ಸಂಭವಿಸದಿರಲಿ ಎಂದು ಮುಂಜಾಗೃತಾ ಕ್ರಮವಾಗಿ ಜಲಪಾತಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.ಆದರೆ ಬೆಳಗಾವಿ ಅರಣ್ಯ ವಿಭಾಗದ ವ್ಯಾಪ್ತಿಯ ಖಾನಾಪೂರ ತಾಲ್ಲೂಕಿನ ವ್ಯಾಪ್ತಿಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಯಾಗುತ್ತಿರುವದರಿಂದ ಪಶ್ಚಿಮ ಘಟ್ಟದ ವ್ಯಾಪ್ತಿಯ ಖಾನಾಪೂರ ತಾಲ್ಲೂಕಿನಲ್ಲಿರುವ ಜಲಪಾತಗಳಿಗೆ ಸಾರ್ವಜನಿಕರು ಭೇಟಿ ನೀಡುತ್ತಿರುವುದು ಕಂಡು ಬರುತ್ತಿದೆ. ಅರಣ್ಯ ಪ್ರದೇಶದಲ್ಲಿ ಮತ್ತು ಬೆಳಗಾವಿ ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶ, ನಿಷೇಧದ ನಡುವೆಯೂ ಕರ್ನಾಟಕ ಗೋವಾ ಭಾಗದ ಪವಾಸಿಗರು ಮಹಾರಾಷ್ಟ್ರದ ಕೋಲ್ಹಾಪುರ ಜಿಲ್ಲೆಯ ಸುಂಡಿ ಹಾಗೂ ಕಿತವಾಡ ಜಲಪಾತಗಳ ಕಡೆ ಮುಖ ಮಾಡಿರುವದು ಕಂಡುಬರುತ್ತಿದೆ. ಸುಂಡಿ ಹಾಗೂ ಕಿತವಾಡ ಜಲಪಾತಗಳು ಬೆಳಗಾವಿ ಗಾಡಿಭಾಗದ ಸನಿಹ ಅಂತರದಲ್ಲಿ ಇರುದರಿಂದ ಸರ್ವಾಜನಿಕರು ಈ ಕಡೆಗೆ ಮುಖ ಮಾಡಿರುವದು ಕಂಡುಬತುತ್ತಿದೆ.










