Uncategorized

ಭಾಷೆಯ ಹೆಸರಿನಲ್ಲಿ ಮತ್ತೆ ಮಹಾ ಖ್ಯಾತೆ!ಎನ್ ನಿಮ್ ಪ್ರಾಬ್ಲಮ್ಮು ಅಂತ ಕೇಳ್ತಾರಾ ಸಿಎಂ ಡಿಕೆಶಿ?

ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಭೆ

ಸಿಎಂ ಡಿಕೆಶಿ ಬೆಳಗಾವಿಗೆ ಬರುವ ಮುನ್ನಾ ದಿನವೇ ಮಹಾರಾಷ್ಟ್ರ ದಲ್ಲಿ ಮಿಂಚಿನ ಬೆಳವಣಿಗೆಯಾಗಿದ್ದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಗದೆ.ಮುಂಬೈನ ರಾಜಭವನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ.
ಮಾಜಿ ಸಿಎಂ ಶರತ್ ಪವಾರ್, ಡಿಸಿಎಂಗಳಾದ ಏಕನಾಥ ಶಿಂಧೆ, ಸುನೇತ್ರಾ ಪವಾರ್ ನಿತೇಶ ರಾಣಾ ಸೇರಿ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸದಸ್ಯರು ಭಾಗಿಯಾಗಿದ್ದು ಮಹಾ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಡದ್ರೋಹಿ ಎಂಇಎಸ್ ಮುಖಂಡರು ಭಾಗಿಯಾಗಿದ್ದಾರೆ.
ಇನ್ನು ಸಭೆಯಲ್ಲಿ ಕರ್ನಾಟಕದ ವಿರುದ್ಧವಾಗಿ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದೆ.ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಬೆನ್ನಿಗೆ ನಿಲ್ಲುತ್ತೆವೆ ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಗಡಿ ಭಾಗದ ಮರಾಠಿ ಭಾಷಿಕರಿಗೆ ಶಿಕ್ಷಣದಲ್ಲಿ ಮೀಸಲಾತಿ, ಹೆಲ್ತ್ ಸ್ಕೀಂ ಅನ್ನು ಮಹಾರಾಷ್ಟ್ರ ಮಹಾ ಸರ್ಕಾರ ನೀಡ್ತಿದೆ.
ಒಕ್ಕೂಟ ವ್ಯವಸ್ಥೆ ಧಿಕ್ಕರಿಸಿ ಕರ್ನಾಟಕದ ಗಡಿ ಪ್ರದೇಶದ ಮರಾಠಿ ಭಾಷಿಕರಿಗೆ ವಿವಿಧ ಯೋಜನೆ ಘೋಷಣೆಯನ್ನು ಸರ್ಕಾರ ಮಾಡಿದೆ.ಇನ್ನು‌ ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ಗಡಿ ವಿವಾದ ಸಂಬಂಧ ಸಭೆ ನಿಗದಿ ಮಾಡಲಾಗಿದೆ.ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ತೀವ್ರಗೊಳಿಸಲು ಗಡಿ ಉನ್ನತ ಮಟ್ಟದ ಸಮಿತಿ ನಿರ್ಧಾರ ಮಾಡಿದೆ.ಇನ್ನು ಇದೊಂದು ಕಡೆಯಾದರೆ ಮಹಾರಾಷ್ಟ್ರದ ವಿವಾದಾತ್ಮಕ ನಿರ್ಧಾರದ ಬೆನ್ನಲ್ಲೇ ‌ಇಂದು ಬೆಳಗಾವಿಗೆ ಸಿಎಂ ಡಿಕೆಶಿ ಪ್ರವಾಸ ಕೈಗೊಂಡಿದ್ದಾರೆ.
ವಿಶೇಷ ವಿಮಾನದ ಮೂಲಕ ಬೆಳಗ್ಗೆ 10.40 ಕ್ಕೆ ಬೆಳಗಾವಿಯ ಸಾಂಬ್ರಾಗೆ ಡಿಕೆ ಆಗಮಿಲಿರುವ ಸಿಎಂ ಪ್ರಾದೇಶಿಕ ವಿಭಾಗಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.ನಾಲ್ಕು ಗಂಟೆಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಯಲಿದ್ದು ಈ ಸಭೆ ಬಳಿಕ ಸೌಧದಲ್ಲೇ ದಕ್ಷಿಣ ಭಾರತ ಶುಗರ್ಸ್ ಮಿಲ್ಸ್ ಒಕ್ಕೂಟದ ಪ್ರತಿನಿಧಿಗಳ ಸಭೆ ನಿಗಧಿಯಾಗಿದೆ.ಇನ್ನು ಸಭೆ ಬಳಿಕ ಬೆಳಗಾವಿಯ ಕಾಂಗ್ರೆಸ್ ಭವನಕ್ಕೆ ಆಗಮಿಸಲಿರುವ ಸಿಎಂ ಪಕ್ಷದ ಕಾರ್ಯಕರ್ತರ ಜೊತೆಗೆ ಸಭೆ ಮಾಡಲಿದ್ದಾರೆ.ಇನ್ನು ಮಹಾರಾಷ್ಟ್ರದ ತೆಗೆದುಕೊಂಡ ತೀರ್ಮಾನದ ವಿರುದ್ಧ ಸಿಎಂ ಡಿಕೆಶಿ ಗಟ್ಟಿಯಾದ ನಿರ್ಧಾರ ಕೈಗೊಳ್ತಾರಾ ಅಥವಾ ಮಹಾರಾಷ್ಟ್ರಕ್ಕೆ ಠಕ್ಕರ್ ಕೊಡುವ ಕೆಲಸಕ್ಕೆ ಮುಂದಾಗ್ತಾರಾ ಕಾದು ನೋಡಬೇಕಿದೆ.

TV24 News Desk
the authorTV24 News Desk

Leave a Reply