






ಮಹಾರಾಷ್ಟ್ರ:
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ರಣರಕ್ಕಸ ಮಳೆಗೆ ಅಲ್ಲಿನ ಜನ ಅಕ್ಷರಶಃ ನಲುಗಿದ್ದಾರೆ. ಅದರಲ್ಲೂ ಮಾಯಾನಗರಿ ಮುಂಬೈನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮುಂಬೈನ ಥಾಣೆ, ಹಾಗೂ ಅಂದ್ಹೇರಿ ಸೇರಿದಂತೆ ಚಾಂದಿವಾಲಿ ಪ್ರದೇಶಗಳಲ್ಲಿ ನಿರಂತರ ಮಳೆಯಿಂದ ಜನ ನಲುಗಿದ್ದು ಮನೆ ಬಿಟ್ಟು ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ನಡು ರಸ್ತೆಯಲ್ಲಿಯೇ ನೀರಲ್ಲಿ ಆಟೋ ಸೇರಿದಂತೆ ಕಾರು ಕೆಟ್ಟು ನಿಂತು ಜನ ಪರದಾಡಿದ ಸ್ಥಿತಿ ಉಂಟಾಗಿದೆ. ಇನ್ನು ಚಾಂದಿವಾಲಿ ವಿಧಾನಸಭಾ ಕ್ಷೇತ್ರದಲ್ಲಿ ಜನ ಅಲ್ಲಿನ ಆಡಳಿತ ವ್ಯವಸ್ಥೆಯ ಕುರಿತು ವಿಭಿನ್ನವಾಗಿ ಪ್ರತಿಭಟಿಸಿದ್ದು ಹರಿಯುವ ನೀರಲ್ಲಿ ಟಯರ್ ಟ್ಯೂಬ್ ತಂದು ಅದರ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ದು ಇದು ನಮ್ಮ ವ್ಯವಸ್ಥೆ ಇದು ಚಾಂದಿವಾಲಿ ವಿಧಾನಸಭಾ ಕ್ಷೇತ್ರದ ಸ್ಥಿತಿ ಎಂದು ವಿಡಿಯೋ ಮಾಡಿ ಯುವಕರು ತಮ್ಮ ಸ್ಥಳೀಯ ಆಡಳಿತದ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಮುಂಬೈ ಮಹಾನಗರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಅಲ್ಲಿನ ರಸ್ತೆಗಳೆಲ್ಲವೂ ಸಹ ಹಳ್ಳ ಕೊಳ್ಳಗಳಂತೆ ಭಾವಾಗುತ್ತಿದೆ. ಇನ್ನು ಜನಾಕ್ ಪ್ರದೇಶದಲ್ಲಿರುವ ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಮನೆಯ ಮುಂದೆ ಮುಂದೆಯೂ ಮಳೆಯ ನೀರು ಆವರಿಸಿದ್ದು ಮುಂಬೈ ಮಹಾನಗರ ಮಳೆಗೆ ನುಲುಗಿದೆ.









