


ಚಿಕ್ಕೋಡಿ:
ಜಮೀನು ವಿವಾದ ಹಾಗೂ ಬೆಳೆದ ಬೆಳೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ದಾಯಾದಿಗಳು ಬಡಿದಾಡಿಕೊಡು ಆಸ್ಪತ್ರೆ ಸೇರಿದ್ದಾರೆ.ಕಣ್ಣಿಗೆ ಖಾರದ ಪುಡಿ ಎರಚಿ, ಕಬ್ಬಿಣದ ರಾಡ್, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ಆಗಸ್ಟ್ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮ ಈ ದಾಯಾದಿ ಕಲಹಕ್ಕೆ ಸಾಕ್ಷಿಯಾಗಿದೆ.ಪೂಕಾಟೆ ಕುಟುಂಬದ ಅಣ್ಣತಮ್ಮಂದಿರ ನಡುವೆ ಗಲಾಟೆ ನಡೆದಿದ್ದು
50 ಕ್ಕೂ ಅಧಿಕ ಜನರ ಗುಂಪಿನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಹೊಲದ ವಿವಾದ ಹಾಗೂ
ಗದ್ದೆಯಲ್ಲಿ ಬೆಳೆದಿದ್ದ ಗೋವಿನ ಜೋಳ,ಅರಿಶಿಣದ ಬೆಳೆಯನ್ನು ನಾಶ ಮಾಡಿದ ಆರೋಪ ಪೊಕಾಟೆ ಕುಟುಂಬಸ್ಥರ ಮೇಲೆ ಕೇಳಿ ಬಂದಿದೆ.ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಗೋವಿನ ಜೋಳದ ಬೆಳೆ ನಾಶ ಮಾಡಲು ರೇವಪ್ಪ ಪೂಕಾಟೆ ಕುಟುಂಬಸ್ಥರು ಮುಂದಾಗಿದ್ದರು ಎನ್ನಲಾಗಿದೆ.ಹೊಲದಲ್ಲಿ ಬೆಳೆದಿದ್ದ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ತಕರಾರು ಮಾಡಿದ್ದು ಪರಸ್ಪರ ಎರಡೂ ಕುಟುಂಬಸ್ಥರಿಂದ ಎಫ್ ಐ ಆರ್ ದಾಖಲಾಗಿದೆ.ಒಂದು ಎಫ್ ಐ ಆರ್ ನಲ್ಲಿ 32 ಜನರ ವಿರುದ್ದ ದೂರು ದಾಖಲಾಗಿದ್ದು ಅವರ ವಿರುದ್ಧವಾಗಿ ಮತ್ತೊಂದು ಎಫ್ ಐ ಆರ್ ನಲ್ಲಿ ಒಟ್ಟು 9 ಜನರ ವಿರುದ್ಧ ದೂರು ದಾಖಲಾಗಿದೆ.ಒಟ್ಟು 16 ಏಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಾಗಿ ಅಣ್ಣತಮ್ಮಂದಿರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.ಜಮೀನು ವ್ಯಾಜ್ಯ ಹಿನ್ನೆಲೆ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿತ್ತು ಎನ್ನಲಾಗಿದ್ದು ಕೋರ್ಟ್ ನಲ್ಲಿ ವ್ಯಾಜ್ಯವಿತ್ತು ಎನ್ನಲಾಗಿದೆ. ಕೋರ್ಟ್ ನಲ್ಲಿ ಪ್ರಕರಣವು ಒಂದು ಪಕ್ಷದ ಪಿರ್ಯಾದುದಾರ ಭೀಮಪ್ಪ ಲಕ್ಷ್ಮಣ ಪುಕಾಟೆ ಪರವಾಗಿ ಆದೇಶವಾಗಿದೆ ಎನ್ನಲಾಗಿದೆ. ಭೀಮಪ್ಪ ಪುಕಾಟೆ ತನ್ನಪರವಾಗಿ ಆದ ಗದ್ದೆಯಲ್ಲಿ ಕಾಲುವೆ ಸ್ಚಚ್ಛಗೊಳಿಸುವ ಸಂದರ್ಭದಲ್ಲಿ ಇನ್ನೊಂದು ಪಕ್ಷದ ಬಾಳವ್ವ ಪುಕಾಟೆ ಹಾಗೂ ಅವರ ಅಣ್ಣತಮ್ಮಂದಿರು ಹಲ್ಲೆ ಮಾಡಿದ್ದಾರೆ ಎಂದು ಪರಸ್ಪರ ದೂರಿನಲ್ಲಿ ದಾಖಲಾಗಿದೆ.
ಸದ್ಯ ಘಟನೆಯಲ್ಲಿ ಗಾಯಗೊಂಡವರು ಚಿಕ್ಕೋಡಿ ಹಾಗೂ ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದು .
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.










