



ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪತ್ರಕರ್ತರ ಆರೋಗ್ಯಕ್ಕಾಗಿ ಜಾರಿಗೆ ತಂದಿದ್ದ ಆರೋಗ್ಯ ವಿಮೆ ಯೋಜನೆಗೆ ಅನುದಾನವಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿದ್ದರಿಂದ ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರು, ಹಾಗೂ ಪ್ರಿಂಟ್ ಮೀಡಿಯಾ ಪತ್ರಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿದರು.ಪಾಲಿಕೆ ಆಯುಕ್ತರ ಚೇಂಬರ್ ಮುಂದೆಯೇ ನೆಲದ ಮೇಲೆ ಕುಳಿತು ಪತ್ರಕರ್ತರು ನಡೆಸಿದ ಪ್ರತಿಭಟನೆಗೆ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಹಾಗೂ ಮೇಯರ್ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಹನಮಂತ ಕೊಂಗಾಲಿ ಸ್ಪಂಧಿಸಿದರು. ಪತ್ರಕರ್ತರು ಧರಣಿಗೆ ಕುಳಿತ ವಿಚಾರ ತಿಳಿದು ಪಾಲಿಕೆಗೆ ಆಗಮಿಸಿದ ಶಾಸಕ ಅಭಯ್ ಪಾಟೀಲ್ ಪತ್ರಕರ್ತರಿಗಾಗುತ್ತಿರುವ ತೊಂದರೆಗಳ ಕುರಿತು ಸಮಸ್ಯೆ ಆಲಿಸಿದರು. ಈ ಹಿಂದೆ ಪಾಲಿಕೆಯಿಂದ ಜಾರಿಯಾಗಿದ್ದ ಆರೋಗ್ಯವಿಮೆ ಜಾರಿಗೊಳಿಸಲು ಅಧಿಕಾರಿಗಳು ಅನುದಾನದ ಕೊರೆತೆ ಇದೆ ಎಂದು ಹೇಳುತ್ತಿದ್ದಾರೆ ಎಂದು ಪತ್ರಕರ್ತರ ದೂರಿದರು. ನಂತರ ಅಧಿಕಾರಿಗಳಿಗೆ ಹಿಂದೆ ಇದ್ದ ರೀತಿಯಲ್ಲಿಯೇ ಬಜೇಟ್ ನಲ್ಲಿ ಪತ್ರಕರ್ತರ ಆರೋಗ್ಯ ವಿಮೆಗೆ ಅನುದಾನ ಮೀಸಲಿಡಿ ಎಂದು ಸೂಚನೆ ನೀಡಿದರು. ಇದೇ ಸಮಯದಲ್ಲಿಯೇ ಬೆಳಗಾವಿ ನಗರ ಹೊರತುಪಡಿಸಿ ಹೊರ ತಾಲೂಕು ಹಾಗೂ ಹೊರಪ್ರದೇಶಗಳಿಂದ ಹೆಸರು ಸೇರಿಸಿದ್ದ ಪತ್ರಕರ್ತರು ಹಾಗೂ ತೀರಿ ಹೋದ ಪತ್ರಕರ್ತರ ಹೆಸರುಗಳು ಸೇರಿದಂತೆ ಬೆಳಗಾವಿಯಿಂದ ವರ್ಗಾವಣೆಯಾದ ಪತ್ರಕರ್ತರ ಹೆಸರುಗಳನ್ನು ಶಾಸಕರು ಹಾಗೂ ಮೇಯರ್ ಉಪಮೇಯರ್ ಸೇರಿದಂತೆ ಎಲ್ಲಾ ಪತ್ರಕರ್ತರ ಮುಂದೆಯೇ ಪರಿಷ್ಕರಿಸಿ ಕೂಡಲೇ ಟೆಂಡರ್ ಮಾಡಿ ಪತ್ರಕರ್ತರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕ ಅಭಯ್ ಪಾಟೀಲ್ ಸೂಚಿಸಿದರು.








