ಬೆಳಗಾವಿ

ರಾಮದುರ್ಗದಲ್ಲಿ ಶಾಲಾ ಮಕ್ಕಳಿಗೆ ಮಾಸ್ಕ್ ಕಡ್ಡಾಯ ..! 

ರಾಮದುರ್ಗ :ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಇರುವಂತಹ ಬಾಲಕಿಯರ ನೂತನ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಕೋನದಿಂದ ಮುಂಜಾಗ್ರತ ಕ್ರಮವಾಗಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕನ್ನು ಕಡ್ಡಾಯವಾಗಿ ಧರಿಸಲು ಮುಖ್ಯೋಪಾಧ್ಯಾಯರು ಆದೇಶ ಹೊರಡಿಸಿದ್ದಾರೆ. 
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಎಸ್ ಡಿ ಚೌಹಾನ ಮಕ್ಕಳೊಂದಿಗೆ ಕೋವಿಡ್ ಹರಡುವಿಕೆ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆಯನ್ನು ಹೇಳಿದರು. ಚೀನಾದಿಂದ ಬಂದ 35 ವರ್ಷದ ವ್ಯಕ್ತಿ ಒಬ್ಬರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಎಂಬುದು ದೃಡಪಟ್ಟಿದೆ, ಹಾಗೆಯೇ ರಾಜ್ಯಕ್ಕೆ ಬಿಎಫ 7 ಒಮಿಕ್ರಾನ್ ಉಪ ತಳಿ ಆತಂಕ ಹೆಚ್ಚಾಗಿದೆ ಹಾಗಾಗಿ ನಾವು ಮುಂಜಾಗ್ರತ ಕ್ರಮವಾಗಿ ಕೋವಿಡ್ ರೂಲ್ಸ್ ಪಾಲಿಸೋಣ ಎಂದು ತಿಳುವಳಿಕೆ ಹೇಳಿದರು.
TV24 News Desk
the authorTV24 News Desk

Leave a Reply