



ಬೆಳಗಾವಿ:
ಚಿರತೆ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿ ಚಿರತೆ ಕಂಡು ಬಂದಿದ್ದು ನಿನ್ನೆ ತಡರಾತ್ರಿ ಟ್ರ್ಯಾಕ್ಟರ್ ತೆಗದುಕೊಂಡು ಬರುತ್ತಿದ್ದ ರೈತನಿಗೆ ಚಿರತೆ ಕಂಡು ಬಂದಿದೆ.
ಸತ್ತಿಗೇರಿ ಮತ್ತು ಮುನವಳ್ಳಿ ಮಾರ್ಗ ಮಧ್ಯೆದಲ್ಲಿ ಕಂಡು ಚಿರತೆಯನ್ನು ಕಂಡು ರೈತರ ಹೌಹಾರಿದ್ದಾನೆ.ಮುನವಳ್ಳಿಯ ಹಳ್ಳದ ಸಮೀಪದ ತೋರಣಗಟ್ಟಿ ಎಂಬುವವರ ಜಮೀನಿನಲ್ಲಿ ಚಿರತೆ ಓಡಾಡಿದೆ.ಚಿರತೆ ಓಡಾಟದ
ವಿಡಿಯೋ ವೈರಲ್ ಹಿನ್ನಲೆ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.ತಕ್ಷಣ ಸ್ಥಳೀಯರಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಕ್ರಮ ಕೈಗೊಂಡಿಲ್ಲಾ ಎನ್ನುವ ಆರೋಪ ಕೇಳಿ ಬಂದಿದೆ.
ಚಿರತೆ ಪ್ರತ್ಯಕ್ಷವಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು
ಚಿರತೆ ಸೆರೆ ಹಿಡಿಯುವಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.ರಾತ್ರಿ ಸಮಯದಲ್ಲಿ ಅತೀ ಹೆಚ್ಚು ರೈತರು ಜಮೀನಿಗೆ ಹೋಗುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ರೈತರು ಒತ್ತಾಯಿಸಿದ್ದಾರೆ.









